ಹೆಸರು ಖರೀದಿಗೆ ಆಲ್‍ಲೈನ್  ನೋಂದಣಿ ಆರಂಭ

ಕಲಬುರಗಿ ಸ 8, ಸಹಕಾರ ಇಲಾಖೆಯ  ಹೆಸರು ಬೆಳೆಯ ಬೆಲೆ ಸ್ಥಿರೀಕರಣ ಯೋಜನೆಯಡಿ ಜಿಲ್ಲೆಯಲ್ಲಿ 30 ಹೆಸರುಕಾಳು ಖರೀದಿ ಕೇಂದ್ರಗಳನ್ನು ವಿವಿಧ ತಾಲೂಕುಗಳಲ್ಲಿ ತೆರೆಯಲು ಉದ್ದೇಶಿಸಲಾಗಿದೆ.

ಹೆಸರು ಬೆಳೆ ಬೆಳೆದ ರೈತರು ಹತ್ತಿರವಿರುವ ಯಾವುದೇ ಹೆಸರುಕಾಳು ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ಸರತಿ ಸಾಲಿನಲ್ಲಿ ಆನಲೈನನಲ್ಲಿ ನೋಂದಾಯಿಸಲು ಕೋರಲಾಗಿದೆ. ನೋಂದಣಿಯನ್ನು ಸಪ್ಟೆಂಬರ್ 16 ರೊಳಗೆ ಪೂರ್ಣಗೊಳಿಸಬೇಕು.

ಕಂದಾಯ ಇಲಾಖೆ ಸಿಬ್ಬಂದಿಗಳು ಖುದ್ದಾಗಿ ಬೆಳೆ ಪರಿಶೀಲಿಸಿ ಬೆಳೆಯ ಬಿತ್ತನೆ ಪ್ರಮಾಣ ಪತ್ರ ನೀಡುತ್ತಿದ್ದು, ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡು ಬಂದರೆ ಸಂಬಂದಪಟ್ಟವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವದು.

ಬೆಳೆ ಸ್ಥಿರೀಕರಣ ಯೋಜನೆಯಡಿ ಸ್ಥಾಪಿಸಲು ಉದ್ದೇಶಿಸಿರುವ ತಾಲುಕುವಾರು ಪರಿಸ್ಕøತ ಹೆಸರುಕಾಳು ಖರೀದಿ ಕೇಂದ್ರಗಳ ವಿವರ:

1)ಅಫಜಲಪೂರ:ಅತನೂರ ,ಅಳಂದ:ನಿಂಬರಗಾ, ಕಮಲಾನಗರ, ಖಜೂರಿ, ಮಾದನಹಿಪ್ಪರಗಾ,2)ಚಿಂಚೋಳಿ:ಕೋಡ್ಲಿ, ಸುಲೆಪೇಟ, ಐನಾಪೂರ, ಚಿಮ್ಮನಚೋಡ, ನಿಡಗುಂದಾ, ಕನಕಪೂರ, 3)ಚಿತ್ತಾಪುರ:ರಾವೂರ, ಭೀಮನಳ್ಳಿ, ನಾಲವಾರ, ಕಾಳಗಿ, ಗುಂಡಗುರ್ತಿ, ದಂಡೋತಿ, ಕೊಡದೂರ,4)ಕಲಬುರಗಿ:ಬೇಲೂರ (ಕೆ), ಮಹಾಗಾಂವ, ಸಾವಳಗಿ (ಬಿ), ಕವಲಗಾ (ಬಿ),5)ಜೇವರ್ಗಿ:ನೆಲೋಗಿ, ಮುತ್ತಖೋಡ, 6)ಸೇಡಂ:ಅಡಕಿ, ಕೋಡ್ಲಾ, ಮುಧೋಳ, ಮಳಖೇಡ, ಸಿಂಧನಮಡು, ಮೋತಕಪಲ್ಲಿ ಗ್ರಾಮಗಳಲ್ಲಿ ಖರೀದಿಕೇಂದ್ರ ಆರಂಭಿಸಲಾಗುವದು ಎಂದು  ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ…

Leave a Comment