ಹೆಸರು ಕಾಳು ಖರೀದಿ ಕೇಂದ್ರಕ್ಕೆ‌ ಇಂದು ಅಧಿಕೃತ ಚಾಲನೆ

ಧಾರವಾಡ.ಸೆ3 : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಸಂಸದ   ಪ್ರಹ್ಲಾದ ಜೋಶಿ ಹಾಗೂ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರು ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ‌ ಇಂದು ಅಧಿಕೃತ ಚಾಲನೆ ನೀಡಿದರು.
ಗೋವನಕೊಪ್ಪ ಗ್ರಾಮದ ರೈತ ದೊಡ್ಡಗೂಳಪ್ಪ ಕರಿಗಾರ ಅವರಿಂದ ಹೆಸರು ಕಾಳು ಖರೀದಿ ಮಾಡುವ ಮೂಲಕ ಖರೀದಿ ಕಾರ್ಯ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ತಹಸಿಲ್ದಾರ ಪ್ರಕಾಶ ಕುದರಿ, ಎ.ಪಿ.ಎಮ್.ಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ, ಸದಸ್ಯರು, ಕೆಎಮ್ಎಫ್ ಅಧ್ಯಕ್ಷ ಶಂಕರ  ಮುಗದ, ಕಾರ್ಯದರ್ಶಿ ವಿ. ವಿಜಯಕುಮಾರ, ಕೃ.ಉ.ಮಾ.ಇ. ಉಪನಿರ್ದೇಶಕ  ಲಮಾಣಿ  ಸೇರಿದಂತೆ ರೈತರು, ರೈತ ಮುಖಂಡರು ಪಾಲ್ಗೊಂಡಿದ್ದರು.

Leave a Comment