ಹೆಲ್ಮೆಟ್ ಕಡ್ಡಾಯ ಬಗ್ಗೆ ಪೊಲೀಸರಿಂದ ಜಾಗೃತಿ

ಬಳ್ಳಾರಿ, ಅ.10: ದ್ವಿ ಚಕ್ರವಾಹನಗಳ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿ ನಗರ ಪೊಲೀಸರು ವಿಶೇಷ ಅಭಿಯಾನ ನಡೆಸುತ್ತಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದಲೂ ಬಳ್ಳಾರಿಯ ಬ್ರೂಸ್ ಪೇಟೆ ಹಾಗೂ ಸಂಚಾರಿ ಠಾಣೆಯ ಪೊಲೀಸರು ‘ಹೆಲ್ಮೆಟ್ ಕಡ್ಡಾಯ’ ಧರಿಸುವ ಬಗ್ಗೆ ದ್ವಿ ಚಕ್ರವಾಹನಗಳ ಸವಾರರಲ್ಲಿ ತಿಳುವಳಿಕೆ, ಜಾಗೃತಿ ಮೂಡಿಸುತ್ತಿದ್ದಾರೆ.

ದ್ವಿ ಚಕ್ರವಾಹನಗಳ ಸವಾರರು ತಪ್ಪದೇ ಹೆಲ್ಮೆಟ್ ಗಳನ್ನು ಧರಿಸುವಂತೆ ಬ್ರೂಸ್ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ದೊಡ್ಡಿ ಹಾಗೂ ಟ್ರಾಫಿಕ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಣ ಮತ್ತು ಇತರರು ದ್ವಿ ಚಕ್ರ ವಾಹನಗಳ ಸವಾರರಲ್ಲಿ ಮನವಿ ಮಾಡುತ್ತಾ, ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ಏತನ್ಮಧ್ಯೆ ದ್ವಿ ಚಕ್ರ ವಾಹನಗಳ ಸವಾರರು ‘ಹೆಲ್ಮೆಟ್’ ಧರಿಸದೇ ವಾಹನ ಚಲಾಯಿಸುತ್ತಿರುವುದು ಕಂಡು ಬಂದಲ್ಲಿ ಪೊಲೀಸರು ಅಂತಹವರನ್ನು ತಡೆದು ನಿಲ್ಲಿಸಿ ‘ದಂಡ’ ವಸೂಲಿ ಮಾಡುತ್ತಿರುವುದೂ ಕಂಡು ಬಂದಿದೆ.

ದ್ವಿ ಚಕ್ರ ವಾಹನಗಳ ಸವಾರರು ತಮ್ಮ ಜೀವ ರಕ್ಷಣೆಗಾಗಿ ಸ್ವಯಂ ಪ್ರೇರಣೆಯಿಂದ ‘ಹೆಲ್ಮೆಟ್’ಗಳನ್ನು ಕಡ್ಡಾಯವಾಗಿ ಧರಿಸುವಂತೆ ಜಿಲ್ಲಾ ಎಸ್.ಪಿ. ಆರ್.ಚೇತನ್ ತಿಳಿಸಿದ್ದಾರೆ.

Leave a Comment