ಹೆಬ್ಬಾರ್ ರೇಶನ್ ಕಿಟ್ ವಿತರಣೆಗೆ ಸಚಿವರಿಂದ ಚಾಲನೆ

ಯಲ್ಲಾಪುರ,ಮೇ2 : ಕೊರೊನಾ ಲಾಕ್ ಡೌನ್  ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೆರವಾಗುವುದು ನನ್ನ ಕಾರ್ಯವಾಗಿದೆ ನನ್ನನ್ನು ಈ ಸ್ಥಾನವನ್ನು ನೀಡಿರುವ ಜನತೆಯ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಇಂದು ಯಲ್ಲಾಪುರದ ಉಪಲೇಶ್ವರ‍ದಲ್ಲಿ ಕೋವಿಡ್ 19 ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ” ಹೆಬ್ಬಾರ್ ರೇಷನ್ ಕಿಟ್ ” ಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಇಲ್ಲಿನ ಜನತೆಯ ಜವಾಬ್ದಾರಿ ನಮ್ಮ ಮೇಲಿದ್ದು, ಸದಾ ಅವರ ನೆರವಿಗೆ ನಾವು ಬದ್ಧ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಪ್ರಮುಖರಾದ ವಿನೋದ ಪ್ರಭು ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಸ್ಥಳೀಯ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು.

Leave a Comment