ಹೆದ್ದಾರಿಗಳಲ್ಲಿ ಮರಗಳನ್ನು ನೆಡುವಂತೆ ಸಣ್ಣ,ಮಧ್ಯಮ ಕೈಗಾರಿಕೆಗಳಿಗೆ ಗಡ್ಕರಿ ಕರೆ

 

ನವದೆಹಲಿ, ಜುಲೈ 12 – ಹೆದ್ದಾರಿಗಳಲ್ಲಿ ಮರಗಳನ್ನು ನೆಟ್ಟು, ನಿರ್ವಹಣೆ ಮಾಡುವಂತೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.
ಮುಂಗಾರು ಮುಗಿಯುವ ಮುನ್ನ ಹೆದ್ದಾರಿಗಳ ಉದ್ದಕ್ಕೂ ಎಷ್ಟು ಸಾಧ್ಯವೋ ಅಷ್ಟು ಮರಗಳನ್ನು ನೆಡುವಂತೆ ಸಚಿವ ಗಡ್ಕರಿ ಎಲ್ಲ ಉದ್ಯಮ ಒಕ್ಕೂಟಗಳು ಹಾಗೂ ನೋಂದಾಯಿತ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕರೆ ನೀಡಿದ್ದಾರೆ
ದೇಶಕ್ಕೆ ಸಂಘಟಿತ ಬದ್ಧತೆಗೆ ಕರೆ ನೀಡಿರುವ ಗಡ್ಕರಿ, ಸಣ್ಣ ಉದ್ಯಮಗಳು ಕನಿಷ್ಟ ಐದು ಗಿಡಗಳನ್ನು, ಮಧ್ಯಮ ಉದ್ಯಮಗಳು ಕನಿಷ್ಟ 50 ಗಿಡಗಳನ್ನು, ಅತಿ ಸಣ್ಣ ಉದ್ಯಮಗಳು ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು, ಪೋಷಿಸಿ ನಿರ್ವಹಣೆ ಮಾಡಬಹುದಾಗಿದೆ ಪತ್ರದಲ್ಲಿ ಹೇಳಿದ್ದಾರೆ.
‘ ಹಣ್ಣಿನ ಮರಳು, ಬೇವು ನಂತಹ ಸ್ಥಳೀಯ ವೈವಿಧ್ಯ ಮರಗಳನ್ನು ಬೆಳೆಸಬೇಕು. ಇವುಗಳನ್ನು ರಾಷ್ಟ್ರೀಯ ಇಲ್ಲವೇ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ರಸ್ತೆಗಳಲ್ಲಿ ನೆಡಬಹುದು. ಪ್ರತಿಯೊಂದು ಉದ್ಯಮವೂ ಸಸಿಗಳು ಉಳಿದು ಬೆಳೆಯುವಂತೆ ಅವುಗಳ ನಿರ್ವಹಣೆ ಮಾಡಬೇಕು ಎಂದು ಸಚಿವರು ಕರೆ ನೀಡಿದ್ದಾರೆ.
ರಸ್ತೆ ಅಗಲೀಕರಣ, ಹೆದ್ದಾರಿಗಳ ಮೇಲ್ದರ್ಜೆ ಮುಂತಾದ ಕಾಮಗಾರಿಗಳಿಂದ ರಸ್ತೆ ಬದಿ ಮರಗಳು ನಾಶವಾಗುತ್ತಿರುವ ದಿನಗಳಲ್ಲಿ ಸಚಿವರು ಈ ಕರೆ ನೀಡಿದ್ದಾರೆ.
ನಿತಿನ್‌ ಗಡ್ಕರಿ ಅವರು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ಜೊತೆಗೆ ಭೂಸಾರಿಗೆ ಮತ್ತು ಹೆದ್ದಾರಿ ಖಾತೆಯನ್ನೂ ಹೊತ್ತಿದ್ದಾರೆ.

Leave a Comment