ಹೆಣ್ತೆತ್ತಿದವರ ಚಡಪಡಿಕೆ…

ಕನ್ನಡದಲ್ಲಿ ನಾಯಕ ಪ್ರಧಾನ ಚಿತ್ರಗಳದ್ದೇ ಮೈಲುಗೈ..ಹಾಗೊಮ್ಮೆ ಹೀಗೊಮ್ಮೆ ನಾಯಕಿ ಪ್ರಧಾನ ಚಿತ್ರಗಳು ಬರುತ್ತಿವೆ.ಅಂತಹ ಸಾಲಿಗೆ ಪ್ರತಿಭಾವಂತ ನಿರ್ದೇಶಕ ರಾಕೇಶ್ ನಿರ್ದೇಶನದ ’ಪತಿ ಬೇಕು ಡಾಟ್ ಕಾಮ್ ಚಿತ್ರ ಕೂಡ ಒಂದು.

untitled_6-1-2

ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿಕೊಡಲು ಮುಂದಾಗಿರುವ ರಾಕೇಶ್,ಜನರನ್ನು ಅದರಲ್ಲಿಯೂ ಮಧ್ಯಮ ವರ್ಗದ ಹೆಣ್ಣು ಮಕ್ಕಳನ್ನು ಹೆತ್ತ ತಂದೆ-ತಾಯಿಯರ ನೋವು,ಸಂಕಟ,ಸಂಕಷ್ಟಗಳನ್ನು ಚಿತ್ರದಲ್ಲಿ ಅನಾವಾರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮದುವೆ ವಯಸ್ಸಿಗೆ ಬಂದ ಮಗಳಿಗೆ ಹುಡಗನ ಹುಡುಕಾಟ ಒಂದೆಡೆಯಾದರೆ ಮದುವೆಯ ಆರ್ಥಿಕ ಸಮಸ್ಯೆಗಳು ಮತ್ತೊಂದೆಡೆ.ಹಾಗೋ ಹೀಗೋ ಮದುವೆ ಮಾಡಿಯೇ ಬಿಡೋಣ ಎಂದು ನಿರ್ಧರಿಸಿದರೆ ಹುಡುಗ ಸಿಗದೆ ಪರದಾಟ.ಮಗಳ ವಯಸ್ಸು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಸೂಕ್ತ ಹುಡುಗ ಸಿಗದೆ ಅನುಭವಿಸುವ ತಲ್ಲಣ,ತಳಮಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಮಾತಿಗಿಳಿದರು ರಾಕೇಶ್.

untitled_1-58-2

ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು.ಮಗಳಿಗಾಗಿ ಹುಡುಗನ ಹುಡುಕಾಟ ಪೋಷಕರಿಗೆ ಹೇಗೆಲ್ಲಾ ಮನಸ್ಸಿಗೆ ಘಾಸಿಗೊಳಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಯಾವುದೇ ಸಂಕೋಚ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ನಮ್ಮದು.ಇದೇ ಕಾರಣಕ್ಕೆ ಏನೋ ಇಡೀ ಚಿತ್ರರಂಗ ನಮ್ಮ ಬೆಂಬಲಕ್ಕೆ ನಿಂತಿದೆ.ಇದು ಇನ್ನಷ್ಟು ಖುಷಿಕೊಡುವ ಸಂಗತಿ.

ಶಿವರಾಜ್‌ಕುಮಾರ್,ಪುನೀತ್ ರಾಜ್‌ಕುಮಾರ್,ನಿರ್ದೇಶಕ ಪ್ರೇಮ್,ಸುದೀಪ್ ಸೇರಿದಂತೆ ಘಟಾನುಘಟಿ ನಾಯಕರು ’ಪತಿಬೇಕು ಡಾಟ್ ಕಾಮ್ ಚಿತ್ರಕ್ಕೆ ಹರಸಿದ್ದಾರೆ ಬೆನ್ನೆಲುಬಾಗಿ ನಿಂತಿರುವುದು ಮತ್ತಷ್ಟು ಬಲ ಬಂದಾಗಿದೆ. ಇದೇ ಖುಷಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಮುಂದಾಗಿದ್ದೇವೆ.

ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ವಾರದಿಂದ ತೆರೆಯ ಮೇಲೆ ಪತಿಯ ಹುಡುಕಾಟ ನಡೆಯುತ್ತದೆ. ಹೆಣ್ಣುಮಕ್ಕಳ ನೋವು ಪ್ರತಿಬಿಂಬಿಸುವ ’ಯಾಕಪ್ಪ ದ್ಯಾವರೇ..ಏನೆಲ್ಲಾ ಕ್ಯಾಬರೇ”ಹಾಡಂತೂ ಎಲ್ಲರಿಗೂ ಹತ್ತಿರವಾಗುವಂತಿದೆ.

ಚಿತ್ರದಲ್ಲಿ ಶೀತಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಜೊತೆಗೆ ಹರಿಣಿ ಮತ್ತು ಕೃಷ್ಣ ಅಡಿಗ ಪಾತ್ರ ತಂದೆ ತಾಯಿ ಪಡುವ ಸಂಕಟಗಳನ್ನು ಅನಾವರಣ ಮಾಡುವಂತಿದೆ. ಇಡೀ ತಂಡ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಇನ್ನು ಜನ ಮೆಚ್ಚಿಕೊಂಡರೆ ನಮ್ಮ ಶ್ರಮ ಸಾರ್ಥಕ ಎನ್ನುತ್ತಾರೆ ಅವರು.

Leave a Comment