ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ಕಲಾ ಪ್ರದರ್ಶನ

ಮೈಸೂರು.ಫೆ.23. ವಿವಿಧ ಕಲಾ ವಿಷಯಗಳನ್ನಾಧರಿಸಿ ಕುಂಚದಿಂದ ರಚಿಸಲಾಗಿರುವ ಕಲಾಕೃತಿಗಳ ಪ್ರದರ್ಶನವನ್ನು ನಗರದ ರಿಂಗ್ ರಸ್ತೆಯಲ್ಲಿರುವ ಹೆಚ್.ಸಿ.ಜಿ.ಆಸ್ಪತ್ರೆಯಲ್ಲಿ ನೆಡೆಸಲಾಗುವುದೆಂದು ಚಿತ್ರಕಲಾವಿದೆ ಭಾಗ್ಯ ಅಜಯ್ ಕುಮಾರ್ ತಿಳಿಸಿದರು.
ಅವರು ನಿನ್ನೆ ಸಂಜೆ ಹೆಚ್.ಸಿ.ಜಿ.ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸ್ವಸ್ತಿ ಹೆಚ್.ಸಿ.ಜಿ. ಸೃಜನಶೀಲ ಆರೈಕೆಯ ಕೇಂದ್ರವಾಗಿದ್ದು ಕ್ಯಾನ್ಸರ್ ರೋಗಿಗಳಿಗೆ ನೆರವಾಗುವಂತೆ ಕಲೆಗಳನ್ನು ರಚಿಸುವುದರ ಮೂಲಕ 2007 ರಿಂದಲೂ ಕಂಕಣ ಬದ್ಧವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಸ್ವಸ್ತಿ ಕಲಾಪ್ರದರ್ಶನ ಮತ್ತು ಶಿಬಿರಗಳನ್ನು ಆಯೋಜಿಸುವುದರ ಮೂಲಕ ಎಲ್ಲಾ ರೀತಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಡಲಾಗಿದ್ದು, ಕಲಾವಿದರು ಮತ್ತು ಕಲಾಪ್ರಿಯರನ್ನು ಒಂದೇ ವೇದಿಕೆಯ ಮೇಲೆ ತರುವುದೇ ಸ್ವಸ್ತಿ ಸಂಸ್ಥೆಯ ಮೂಲ ಉದ್ದೇಶ ಎಂದರು.
ನಗರದಲ್ಲಿ ಆಯೋಜಿಸಲಾಗಿರುವ ಕಲಾ ಪ್ರದರ್ಶನವು ಈ ತಿಂಗಳ 26ರ ವರೆಗೆ ನೆಡೆಯಲಿದೆ. ಇದಕ್ಕೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರವೇಶ ವಿರುತ್ತದೆ, ಈ ಪ್ರದರ್ಶನದಲ್ಲಿ ಫ್ರಾನ್ಸ್, ಲೆಬೆಲಾನ್. ಕಜಕಸ್ಥಾನ್, ರುವೇನಿಯಾ, ಸ್ಟಿಡ್ಜರ್ಲೆಂಡ್, ಯು.ಎಸ್.ಎ. ಹಾಗೂ ಭಾರತದ ಚಿತ್ರಕಲಾವಿದರು ರಚಿಸಿರುವ ಕಲಾಕೃತಿಗಳಿರುತ್ತವೆ. ಬಬಿತಾದಾಸ್, ಡೇವಿಡ್ ಡೇವಿಸನ್, ಕ್ಲಾಡಿಯಾಲಾಜರ್, ನೊರ್ಬುಲೆಟ್ ಆಸ್ಕರ್ ಹಾಗೂ ಸ್ವತಃ ನಾನೊ ಸಹಾ ಕಲೆಯನ್ನು ಬಿಡಿಸಿದ್ದೇನೆ ಎಂದು ಭಾಗ್ಯ ಅಜಯ್ ಕುಮಾರ್ ನುಡಿದರು.
ಈ ಪ್ರದರ್ಶನದ ನಂತರ ಬೆಂಗಳೂರಿನ ಐಬಿಸ್ ಹೋಟೆಲ್‍ನಲ್ಲಿ ಇಲ್ಲಿ ರಚಿಸಲಾಗಿರುವ ಕಲಾ ಚಿತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು, ಈ ಕಲಾಕೃತಿಗಳ ಮಾರಾಟದಿಂದ ಬಂದ ಹಣವನ್ನು ಅಸಾಹಯಕ ಕ್ಯಾನ್ಸ್‍ರ್ ರೋಗಿಗಳ ಚಿಕಿತ್ಸೆಗಾಗಿಯೇ ಮೀಸಲಿಡಲಾಗುವುದು ಎಂದು ಅವರು ತಿಳಿಸಿದರು.
ಹೆಚ್.ಸಿ.ಜಿ ಫೌಂಡೇಷನ್ ಈಗಾಗಲೇ ದೇಶಾದ್ಯಂತ 3500ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡಿದೆ. ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಜನರಿಗಾಗಿ ವಿಶೇಷವಾಗಿ ಕ್ಯಾನ್ಸರ್ ಸ್ಕ್ರೀನಿಂಗ್‍ಗಾಗಿಯೇ “ಸಂಜೀವಿನಿ” ಮೊಬೈಲ್ ಘಟಕವನ್ನೂ ಸಹಾ ಆರಂಭಿಸಲಾಗಿದ್ದು, ಅಲ್ಲಿನ ಜನತೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭಾಗ್ಯ ಅಜಯ್ ಕುಮಾರ್ ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಧಾನದ ಕಲಾವಿದ ಪ್ರೊ.ಡೇವಿಡ್ ವಿಲಿಯಮ್ಸ್, ಬಬಿತಾದಾಸ್, ಸೇರಿದಂತೆ ವಿದೇಶಗಳ ಇನ್ನಿತರ ಕಲಾವಿದರು ಉಪಸ್ಥಿತರಿದ್ದರು. ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಡಾ|| ಜಯರಾಂ ಪತ್ರಿಕಾಗೋಷ್ಠಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

Leave a Comment