ಹೆಚ್.ಡಿ.ಕೆ ರಾಜೀನಾಮೆ ನೀಡಿ ಖರ್ಗೆಗೆ ಸಿಎಂ ಮಾಡಲಿ : ಬಿ.ಎಸ್.ವೈ ಸವಾಲು

 

ಕಲಬುರಗಿ,ಮೇ.15-ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವಾಗಲೋ ಮುಖ್ಯಮಂತ್ರಿಯಾಗಿ ಬೇಕಿತ್ತು ಎನ್ನುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ  ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ. ನಾಳೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರಿಗೆ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

ಚಿಂಚೋಳಿ ದತ್ತು ಪಡೆಯುತ್ತೇನೆ ಎನ್ನುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೂ ಬಿ.ಎಸ್.ವೈ ತಿರುಗೇಟು ನೀಡಿದ್ದು, ಇದುವರೆಗೂ ಚಿಂಚೋಳಿ ಕಡೆಗೆ ತಿರುಗಿಯೂ ನೋಡದ ಮುಖ್ಯಮಂತ್ರಿ ಚುನಾವಣೆಯ ವೇಳೆ ಏನೇನು ಭರವಸೆ ನೀಡುತ್ತಿದ್ದಾರೆ. ಚಿಂಚೋಳಿ ದತ್ತು ಪಡೆಯುವುದಾದರೆ ಮುಖ್ಯಮಂತ್ರಿ ಇಷ್ಟುದಿನ ಏನು ಮಾಡುತ್ತಿದ್ದರು ಎಂದು ಯಡಿಯೂರಪ್ಪ ಪ್ರಶ್ನಿಸಿದರು.

 

Leave a Comment