ಹೆಚ್ಚಿದ ಸೈಬರ್ ಕ್ರೈಂ :ಅಪರಾಧ ತಡೆಗೆ ಬೆಂಗಳೂರು ಪೊಲೀಸರ ಹೊಸಫ್ಲ್ಯಾನ್

ಬೆಂಗಳೂರು .ಆ.೧೪.ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. 2019ರ ಜನವರಿಯಿಂದ ಈವರೆಗೆ ಬರೋಬರಿ 7500 ಎಫ್‌ಐಆರ್ ದಾಖಲಾಗಿದ್ದು, ಪ್ರತಿನಿತ್ಯ 40 ರಿಂದ 50 ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗುತ್ತಿವೆ. ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಹೊಸತಂತ್ರವನ್ನು ರೂಪಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕ್ರೈಂ ಪತ್ತೆಗೆ ಒಂದೇ ಒಂದು ಪೊಲೀಸ್ ಠಾಣೆಯಿದೆ. ಹೀಗಾಗಿ ಸಿಬ್ಬಂದಿಗೆ ಹೊರೆಯಾಗುತ್ತಿದೆ. ಅದಕ್ಕಾಗಿ ಒತ್ತಡ ಕಡಿಮೆ ಮಾಡಲು ಎಲ್ಲ ಡಿಸಿಪಿ ವ್ಯಾಪ್ತಿಯಲ್ಲಿ 8 ಸೈಬರ್ ಕ್ರೈಂ ಠಾಣೆ ತೆರೆಯಲು ನಿರ್ಧರಿಸಲಾಗಿದೆ. ಈ ಮೊದಲು ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಅನುಚೇತ್ ಡಿಜಿ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಡಿಜಿಪಿ ನೀಲಮಣಿ ಎನ್ ರಾಜು ಸರ್ಕಾರಕ್ಕೆ ತಿಳಿಸಿದ್ದರು. ಹೀಗಾಗಿ ಸರ್ಕಾರದಿಂದ 4 ಸೈಬರ್ ಕ್ರೈಂ ಠಾಣೆ ಸ್ಥಾಪನೆಗೆ ಆದೇಶಿಸಲಾಗಿದೆ. ಅಲ್ಲದೇ ೪ ಕೋಟಿ ರೂಪಾಯಿಯೂ ಬಿಡುಗಡೆಯಾಗಲಿದೆ.

ಆಫ್ರಿಕನ್, ನೈಜಿರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರೇ ಹೆಚ್ಚಾಗಿ ಆನ್ ಲೈನ್ ಮೂಲಕ ವಂಚನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ..

Leave a Comment