ಹೆಚ್ಚಾಗುತ್ತಿರುವ ಅಪರಾಧಗಳು; ಆತಂಕ

ದಾವಣಗೆರೆ.ನ.1; ಕಾನೂನು ಕಟ್ಟುನಿಟ್ಟಾಗಿದ್ದರೂ ಸಹ ಅಪರಾಧಗಳ ಸಂಖ್ಯೆ ವ್ಯಾಪಕವಾಗುತ್ತಿರುವುದು ದುರಂತ ಎಂದು ಜಿಲ್ಲಾ ಮತ್ತು ಸತ್ರ ನ್ಯಾಧೀಶರಾದ ಜಿ. ಅಂಬಾದಾಸ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹಳೇ ಕೋರ್ಟ್ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾಪ್ರಾಧಿಕಾರ, ವಕೀಲರ ಸಂಘದಿಂದ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತು ನ್ಯಾಯಾಧೀಶರಿಗೆ ಮತ್ತು ಸರ್ಕಾರಿ ಅಭಿಯೋಜಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ವಕೀಲರಿಗೆ ಕಾಯ್ದೆಗಳ ಬಗ್ಗೆ ಅರಿವು ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ ಅವುಗಳನ್ನು ತಡೆಗಟ್ಟಲು ಕಾನೂನು ಕ್ರಮ ಕೈಗೊಳ್ಳಬೇಕು.ಕಾನೂನು ಕಠಿಣವಾಗಿದ್ದರೂ ಸಹ ಅಪರಾಧಗಳು ಹೆಚ್ಚಾಗುತ್ತಿವೆ. ವಕೀಲರು ಮತ್ತು ಸರ್ಕಾರಿ ಅಭಿಯೋಜಕರು ತಮಗೆ ಗೊತ್ತಿಲ್ಲದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು. ಈ ವೇಳೆ ಕೆ.ಹೆಚ್ ವಿಜಯಕುಮಾರ್, ಹೇಮಂತ್ ಕುಮಾರ್ ಟಿ.ಆರ್, ಎಲ್,ಹೆಚ್ ಅರುಣ್ ಕುಮಾರ್, ಎಸ್ ವಿ ಪಾಟೀಲ್,ಎನ್ ಟಿ ಮಂಜುನಾಥ್, ದಾದಾಪೀರ್ ಇತರರಿದ್ದರು.

Leave a Comment