ಹೆಂಡತಿಯ ಸುಳ್ಳು ಕೇಸ್ ಹಾಗೂ ಪಿಎಸ್ ಐ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ

ಕೊಪ್ಪಳ, ಜೂನ್ 12 – ಕೌಟುಂಬಿಕ ಕಲಹದಿಂದ ರೋಸಿಹೋದ ವ್ಯಕ್ತಿಯೋರ್ವ ಪೊಲೀಸ್ ಅಧಿಕಾರಿ ಹಾಗೂ ತನ್ನ ಹೆಂಡತಿಯ ವಿರುದ್ಧ ಡೆತ್ ನೋಟು ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ದೊಡ್ಡಬಸವರಾಜ ಅಗಸಿಮುಂದಿನ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ದೊಡ್ಡಬಸವರಾಜ್ ಹಾಗೂ ಆತನ ಪತ್ನಿ ಶಿಲ್ಪಾ ಮಧ್ಯೆ ಆಗಾಗ ಕಲಹವಾಗುತ್ತಿತ್ತು. ಹೀಗಾಗಿ ಕೆಲದಿನಗಳ ಹಿಂದೆ ಶಿಲ್ಪಾ, ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು .

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಆರ್‌ಬಿಯ ಪೊಲೀಸ್ ಅಧಿಕಾರಿ ಅಮರೇಶ್ ಹುಬ್ಬಳ್ಳಿ ಅವರು ದೊಡ್ಡಬಸವರಾಜ ಅವರಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದ ಬೇಸತ್ತ ಅವರು ಪತ್ನಿ ಹಾಗೂ ಪೊಲೀಸ್ ಅಧಿಕಾರಿಯ ವಿರುದ್ಧ ಡೆತ್ ನೋಟ್ ಬರೆದಿಟ್ಟು ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೃತನ ಸಂಬಂಧಿಕರು ಶವವನ್ನು ಜಿಲ್ಲಾಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

Leave a Comment