ಹೃದಯ-ನೇತ್ರ ತಪಾಸಣಾ ಶಿಬಿರ

ಹಿರಿಯೂರು. ಆ.30: ಇಲ್ಲಿನ ರೋಟರಿ ಸಭಾಭವನದಲ್ಲಿ ರೋಟರಿ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಇನ್ನರ್‍ವೀಲ್ ಕ್ಲಬ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸರ್ಕಾರಿ ಆಸ್ಪತ್ರೆ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಡಾ. ಮಹಮ್ಮದ್ ರೆಹಾನ್ ಸೈಯೀದ್ ಹಾರ್ಟ್ ಸೆಂಟರ್ ಮತ್ತು ಶ್ರೀನಿವಾಸ ಕಣ ್ಣನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಹೃದಯ ಹಾಗೂ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್ ಕಾರ್ಯಕ್ರಮ ಉದ್ಘಾಟಿಸಿದರು, ರೋಟರಿ ಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ರವಿಶಂಕರ್ ಎಂ.ಎನ್.ಸೌಭಾಗ್ಯವತಿ ದೇವರು ಹೆಚ್.ವೆಂಕಟೇಶ್, ಕಲ್ಲೇಶ್, ಸಪ್ನಾ ಸತೀಶ್, ಕಿರಣ್ ಪ್ರದೀಪ್ ಎಂ.ವಿ ಹರ್ಷ ಹೆಚ್.ಪಿ.ರವೀಂದ್ರನಾಥ್, ಜೋಗಪ್ಪ, ಬಿ.ಕೆ ನಾಗÀಣ್ಣ, ಮಹಬಲೇಶ್ವರ ಶೆಟ್ಟಿ, ಪಿ.ಆರ್. ಸತೀಶ್ ಬಾಬು ಉಶಂಕರ್ ತ್ರಿಯಂಬಕೇಶ್ವರ ಪರಮೆಶವರ ಭಟ್ ಪದ್ಮಾನಜ ಎಂ ಶೆಟ್ಟಿ ಸರ್ವಮಂಗಳ, ಬಸವರಾಜ್ ಭಾಗವಹಿಸಿದ್ದರು. ತಜ್ಞ ವೈದ್ಯರಾದ ಡಾ. ಹರೀಶ್, ಜೋಸೆಫ್ ಇಂದಿರಾ ನಾರಾಯಣ ಸ್ವಾಮಿ ತಪಾಸಣೆ ನಡೆಸಿದರು.

Leave a Comment