ಹೃತಿಕ್ ರೋಷನ್ ಅತ್ಯುತ್ತಮ ನಟ, ಕಿಚ್ಚ ಸುದೀಪ್ ಗೆ ಮೋಸ್ಟ್ ಪ್ರಾಮಿಸಿಂಗ್ ಅ್ಯಕ್ಟರ್ ಪುರಸ್ಕಾರ

ಮುಂಬೈ, ಫೆ 21 ಪ್ರತಿ ವರ್ಷದಂತೆ ಈ ಬಾರಿಯೂ ದಾದಾ ಸಾಹೇಬ್ ಫಾಲ್ಕೆ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಗುರುವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಹಲವು ಬಾಲಿವುಡ್ ಹಾಗೂ ಕಿರುತೆರೆ ತಾರೆಗಳು ಭಾಗವಹಿಸಿದ್ದರು.
ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ …. ಅತ್ಯುತ್ತಮ ಚಿತ್ರವಾಗಿ ‘ಸೂಪರ್ ೩೦” ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಅತ್ಯುತ್ತಮ ರಿಯಾಲ್ಟಿ ಷೋ ಆಗಿ ಬಿಗ್ ಬಾಸ್ ಸೀಸನ್ ೧೩ ಪ್ರಶಸ್ತಿ ಬಾಚಿಕೊಂಡಿದೆ.

ಅತ್ಯುತ್ತಮ ಚಿತ್ರ: ಸೂಪರ್ ೩೦
ಅತ್ಯುತ್ತಮ ನಟ: ಹೃತಿಕ್ ರೋಷನ್
ಹೆಚ್ಚು ಭರವಸೆಯ ನಟ: ಕಿಚ್ಚ ಸುದೀಪ್
ಕಿರುತೆರೆಯಲ್ಲಿ ಸರಣಿಯಲ್ಲಿ ಅತ್ಯುತ್ತಮ ನಟ: ಧೀರಜ್ ಧೂಪರ್
ಕಿರುತೆರೆಯಲ್ಲಿ ಅತ್ಯುತ್ತಮ ನಟಿ; ದಿವ್ಯಾಂಕ ತ್ರಿಪಾಠಿ
ಮೆಚ್ಚಿನ ಕಿರುತೆರೆ ನಟ: ಹರ್ಷದ್ ಚೋಪ್ಡಾ
ಕಿರುತೆರೆ ಸರಣಿಯಲ್ಲಿ ಹೆಚ್ಚು ಜನಪ್ರಿಯ ಜೋಡಿ: ಶ್ರುತಿ ಝಾ, ಶಬ್ಬೀರ್ (ಕುಂಕುಮ ಭಾಗ್ಯ)
ಅತ್ಯುತ್ತಮ ರಿಯಾಲಿಟಿ ಶೋ: ಬಿಗ್ ಬಾಸ್ ಸೀಸನ್ ೧೩
ಅತ್ಯುತ್ತಮ ಕಿರುತೆರೆ ಸರಣಿ: ಕುಂಕುಮ ಭಾಗ್ಯ
ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಮಾನ್ ಮಲಿಕ್

Leave a Comment