ಹೃತಿಕ್- ಟೈಗರ್ ನಡುವೆ ವಾರ್! ಟೀಸರ್‌ನಲ್ಲಿ ಗುಟ್ಟು ರಟ್ಟು

ಯಾವುದೇ ಚಿತ್ರವಿರಲಿ ಅದಕ್ಕೆ ಪ್ರಚಾರ ಬೇಕೇ ಬೇಕು. ಅದರಲ್ಲೂ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಚಿತ್ರವೆಂದ ಮೇಲೆ ಅವರ ಅಭಿಮಾನಿಗಳಿಗೆ ಆ ಚಿತ್ರದ ಬಗ್ಗೆ ಸ್ವಲ್ಪವಾದರೂ ಸುಳಿವು ಸಿಗಲೇಬೇಕು. ಆದರೆ ಈ ಬಾರಿ ಹಾಗಾಗಿಲ್ಲ. ಟೀಸರ್ ಬಿಡುಗಡೆ ಮುಂಚೆ ಯಾವುದೇ ಫೋಟೋ, ದೃಶ್ಯ, ಅಷ್ಟೇ ಏಕೆ ಶೀರ್ಷಿಕೆಯೂ ಬಿಡುಗಡೆಯಾಗದೇ ಬಹಳ ಗುಪ್ತ್ ಗುಪ್ತ್ ಆಗಿಯೇ ನಡೆದಿತ್ತು.

ಅಷ್ಟರ ಮಟ್ಟಿಗೆ ಗುಟ್ಟು ಕಾಯ್ದು ಕೊಂಡಿದ ಯಶ್ ರಾಜ್ ಫಿಲಂನ “ಹೃತಿಕ್ ವರ್ಸಸ್ ಟೈಗರ್” ಎಂದೇ ಬಿಂಬಿತವಾಗಿದ್ದ ಚಿತ್ರದ ಹೆಸರು ಇದೀಗ ‘ವಾರ್’ ಎಂದು ಗುಟ್ಟು ರಟ್ಟಾಗಿದೆ. ಸೋಮವಾರ ತಾನೇ ಚಿತ್ರದ ಟೀಸರ್ ಬಿಡುಗಡೆಯಾಗಿ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಮಹಾನ್ ನಟರ ಸಾಹಸ ಕಂಡು ಬಾಲಿವುಡ್ ಮಂದಿ ಬೆರಗಾದರೇ, ವಾಣಿ ಕಪೂರ್ ಅವರ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ಆಷ್ಯನ್ ಕಿಂಗ್ ಹೃತಿಕ್ ರೋಷನ್ ಅಭಿನಯದ “ಸೂಪರ್ ೩೦” ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಈ ಯಶಸ್ಸಿನ ಗುಂಗಿನಲ್ಲಿರುವ ಹೃತಿಕ್ ಸದ್ದಿಲ್ಲದೆ (ಹೃತಿಕ್ ವರ್ಸಸ್ ಟೈಗರ್) ವಾರ್ ಚಿತ್ರದ ಚೂಟಿಂಗ್ ಮುಗಿದು ಹೋಗಿದೆ. ಈ ಚಿತ್ರ ಬಾಲಿವುಡ್ ರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಈ ಚಿತ್ರದ ಟೀಸರ್ ಬಿಡುಗಡೆ ಮುಂಚೆ ಒಂದೇ ಒಂದು ತುಣುಕಾಗಲೀ, ಫೋಟೋವಾಗಲಿ ಸೋರಿಕೆಯಾಗದ ರೀತಿಯಲ್ಲಿ ನಿರ್ಮಾಪಕರು ಅಷ್ಟೊಂದು ರಹಸ್ಯ ಕಾಪಾಡಿದ್ದರು. ಈ ಚಿತ್ರದ ಬಗ್ಗೆ ರಿವೀಲ್ ಮಾಡಬೇಕೆಂದರೆ ನಿರ್ಮಾಪಕರಿಗೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ವೇದಿಕೆಗಳಿದ್ದರೂ ಆ ಚಿತ್ರದ ಬಗ್ಗೆ ಯಾವುದೇ ಗುಟ್ಟು ರಟ್ಟಾ ಮಾಡದೇ ಯಶ್ ರಾಜ್ ಫಿಲಂ ಹೊಸದೊಂದು ಆಯಾಮಕ್ಕೆ ಮುನ್ನುಡಿ ಬರೆದಿದೆ. ಈ ಚಿತ್ರ ಹೇಗಿರಬಹುದು. ಚಿತ್ರದಲ್ಲಿ ಹೃತಿಕ್ ಮತ್ತು ಟೈಗರ್ ಹೇಗೆ ಕಾಣಿಸುತ್ತಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ. ಇದರಿಂದಾಗಿ ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಬಗ್ಗೆಯೂ ಅಭಿಮಾನಿಗಳು ಊಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದಂತೂ ಸುಳ್ಳಲ್ಲ.

ಅಂದ ಹಾಗೆ ಈ ಚಿತ್ರ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಚಿತ್ರೀಕರಣ ನಡೆದಿದ್ದರೂ ಅದರ ರಹಸ್ಯವನ್ನು ಕಾಯ್ದುಕೊಳ್ಳಲು ಯಶ್ ರಾಜ್ ಫಿಲಂಸ್ ದೊಡ್ಡ ಕಾರ್ಯತಂತ್ರವನ್ನೇ ಹೆಣೆದಿದೆಯಂತೆ. ಇಷ್ಟೊಂದು ಗೌಪ್ಯತೆ ಯಾಕೆ ಎಂಬುದು ಯಾರಿಗೂ ಅರ್ಥವಾಗಿಲ್ಲ. ಇದಕ್ಕೆ ಕಾರಣವಿಷ್ಟೇ ಈ ಚಿತ್ರದ ಟೀಸರ್ ಹೇಗಿರುತ್ತದೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಉದ್ದೇಶವೇ ಗೌಪ್ಯತೆ ಕಾಯ್ದುಕೊಳ್ಳಲು ಪ್ರಮುಖ ಕಾರಣ. ಆದಿತ್ಯ ಚೋಪ್ರಾ ಚಲನಚಿತ್ರದ ಮೊದಲ ಅಧಿಕೃತ ಬಿಡುಗಡೆಗೆ ಮುನ್ನ ಚಲನಚಿತ್ರದ ಬಗ್ಗೆ ಯಾವುದೇ ವಿಷಯ ಬಹಿರಂಗವಾಗಲಾರದು. ಹೀಗಾಗಿ ಬಹಳ ಕಠಿಣ ನಿಯಮಗಳನ್ನು ಅನುಸರಿಸಿರುವುದು ವಿಶೇಷ. ಅದಕ್ಕಾಗಿ ಈ ಚಿತ್ರಕ್ಕೆ ಹೃತಿಕ್ ವರ್ಸಸ್ ಟೈಗರ್ ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ನಾಮಕರಣ ಮಾಡಲಾಗಿತ್ತು. ಬಾಲಿವುಡ್ ಚಿತ್ರರಂಗದ ಇಬ್ಬರು ಯಶಸ್ವಿ ಹೀರೋಗಳು ಅಭಿನಯಿಸಿರುವ ಈ ಚಿತ್ರದಲ್ಲಿ ಪ್ರೇಕ್ಷಕರ ಎದೆ ಬಡಿತವನ್ನು ಹೆಚ್ಚಿಸುವ ಹೊಸ ಟ್ರೆಂಡ್ ಅನ್ನು ಹೆಚ್ಚಿಸುವ ಉದ್ದೇಶದಿಂದ ನಿರ್ಮಾಪಕರು ಹೀಗೆ ಮಾಡಿದ್ದಾರಂತೆ. ಪ್ರೇಕ್ಷಕರನ್ನು ಹಿಡಿದಿಟ್ಟಿಕೊಳ್ಳಲು ಹಾಗೂ ಈ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸದಿರುವುದ ಜಾಣ್ಮೆಯ ನಿರ್ಧಾರವನ್ನು ಸಿದ್ದಾರ್ಥ್ ಆನಂದ್ ಮಾಡಿದ್ದರು.

ಟೀಸರ್‌ಗೆ ಬೆಚ್ಚಿಬಿದ್ದ ಅಭಿಮಾನಿಗಳು
ಟೀಸರ್‌ನಲ್ಲಿ ಇಬ್ಬರ ಮಧ್ಯೆ ನಡೆಯುವ ಸಾಹಸ ದೃಶ್ಯಗಳಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು, ಒಂದೊಂದು ದೃಶ್ಯವೂ ಮೈನವೀರೆಳಿಸುವಂತೆ ನಟರು ನಟಿಸಿದ್ದಾರೆ. ಮೊದಲ ಟೀಸರ್‌ನಲ್ಲಿಯೇ ಯುದ್ಧ ಶುರುವಾಗಿದೆ ಎಂದು ಬಿಂಬಿಸಲಾಗಿದ್ದು, ಮಾಸ್ ಅಭಿಮಾನಿಗಳಿಗೆ ಹೃತಿಕ್ ಹಾಗೂ ಟೈಗರ್‌ನ ಗೆಟಪ್ ನೋಡಿ ರೊಮೋಂಚನಗೊಂಡು ಬೆಚ್ಚಿಬಿದ್ದಿದ್ದಾರೆ. ಇಬ್ಬರ ಯುದ್ದದಲ್ಲಿ ಗೆಲುವು ಯಾರಿಗೆ ಎಂಬುದು ಚಿತ್ರ ತೆರಗೊಂಡ ಮೇಲೆ ಗೊತ್ತಗಲಿದೆ. ಟೀಸರ್ ವೀಕ್ಷಿಸಲು https://youtu.be/ayJTIF7kRHg
ಬಾಲಿವುಡ್‌ನ ಅತ್ಯಂತ ದೊಡ್ಡ ಹಾಗೂ ಅತ್ಯುತ್ತಮ ಆಕ್ಷನ್ ಸೂಪರ್‌ಸ್ಟಾರ್‌ಗಳನ್ನು ಒಟ್ಟಿಗೆ ತಂದಾಗ ಮತ್ತು ಅವರನ್ನು ಮುಖಾಮುಖಿಯಾಗಿಸಿದಾಗ ಅದನ್ನು ತೋರುವಂತಹ ಅದ್ಭುತ ಶೀರ್ಷಿಕೆ ಅಗತ್ಯ. ಹೃತಿಕ್ ಮತ್ತು ಟೈಗರ್ ಪರಸ್ಪರ ಭೀಕರವಾಗಿ ಮತ್ತು ಹೃದಯಬಡಿತ ಹೆಚ್ಚಿಸುವಂತೆ ಹೋರಾಡುತ್ತಾರೆ. ಪ್ರೇಕ್ಷಕರು ಈ ಅಸಾಧಾರಣ ಹೋರಾಟದಲ್ಲಿ ಯಾರು ಯಾರನ್ನು ಮೀರುತ್ತಾರೆ ಎಂದು ನೋಡಲು ಬಯಸುತ್ತಾರೆ. ವಾರ್ ಎಂಬ ಶೀರ್ಷಿಕೆ ಈ ಬಹುದೊಡ್ಡ ಭರವಸೆಯನ್ನು ಈಡೇರಿಸಬಲ್ಲ ಏಕೈಕ ಶೀರ್ಷಿಕೆಯಾಗಿದೆ. ಗಾಂಧಿ ಜಯಂತಿಯಂದು ಈ ಚಿತ್ರ ತೆರೆಗೆ ಅಪ್ಪಳಿಸಲಿದೆ.
ಸಿದ್ಧಾರ್ಥ್ ಆನಂದ್
ನಿರ್ದೇಶಕ

Leave a Comment