ಹೃತಿಕ್ ಚಿತ್ರದಿಂದ ಹೊರಬಿದ್ದ ಸಾರಾ ಆರಂಭದ ಚಿತ್ರದಲ್ಲಿ ದಂತಭಗ್ನ

ಬಾಲಿವುಡ್‌ನ ಹಿರಿಯ ನಟ ಸೈಫ್ ಆಲಿಖಾನ್ ಮತ್ತು ವಿಚ್ಛೇದಿತಾ ಅಮೃತಾ ಸಿಂಗ್ ದಂಪತಿಯ ಪುತ್ರಿ ಸಾರಾ ಆಲಿಖಾನ್ ಬಾಲಿವುಡ್ ಪ್ರವೇಶಿಸಲಿದ್ದಾರೆ ಎನ್ನುವ ಮಾತುಗಳಿಗೆ ಸ್ವಲ್ವ ಹಿನ್ನೆಡೆಯಾಗಿದೆ.

ಹೃತಿಕ್ ರೋಶನ್ ಚಿತ್ರದ ಮೂಲಕ ಸೈಫ್ ಆಲಿಖಾನ್ ಅವರ ಪುತ್ರಿ ಸಾರಾ ಆಲಿಖಾನ್ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಹಲವು ದಿನಗಳ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳಿಗೆ ಬ್ರೇಕ್ ಬಿದ್ದಿದೆ. ಅರ್ತಾಥ್ ಚಿತ್ರದಿಂದ ಸಾರಾಗೆ ಕೊಕ್ ನೀಡಲಾಗಿದೆ.

ಎಲ್ಲಾವೂ ಅಂದುಕೊಂಡಂತೆ ಆಗಿದ್ದರೆ ಬಾಲಿವುಡ್‌ನ ಮತ್ತೊಬ್ಬ ಸ್ಥುರದ್ರೂಪಿ ನಟ ಹೃತಿಕ್ ರೋಶನ್ ಚಿತ್ರದ ಮೂಲಕ ಸಾರಾ ಆಲಿ ಖಾನ್ ಬೆಳ್ಳಿ ತೆರೆ ಪ್ರವೇಶಿಸಬೇಕಾಗಿತ್ತು. ಇದಕ್ಕಾಗಿ ಮಾತುಗಳು ನಡೆದಿದ್ದು ಎಲ್ಲವೂ ಪಕ್ಕಾ ಆಗಿತ್ತು. ಹೃತಿಕ್ ರೋಶನ್ ಚಿತ್ರದ ಮೂಲಕ ಪುತ್ರಿ ಸಾರಾ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎನ್ನುವ ವಿಷಯ ಅಪ್ಪ ಸೈಫ್ ಆಲಿಖಾನ್‌ಗೂ ಸಂತಸ ತಂದಿತ್ತು.
ಇನ್ನೇನು ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಚಿತ್ರದಿಂದ ಸಾರಾ ಆಲಿ ಖಾನ್ ಹೊರಬಿದ್ದಿದ್ದಾರೆ. ಇದಕ್ಕೆ ನಿಖರವಾದ ಕಾರಣ ಏನು ಎನ್ನುವುದನ್ನು ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ಆದರೆ ಈ ಕುರಿತು ಚಿತ್ರತಂಡದ ಯಾರೂ ಕೂಡ ಸಾರಾ ಆಲಿಖಾನ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಾಗಿದೆ.
ಚೊಚ್ಚಲ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡುವ ಸಾರಾ ಆಲಿಖಾನ್ ಉತ್ಸಾಹಕ್ಕೆ ತಣ್ಣೀರು ಬಿದ್ದಿದೆ. ಕರಣ್ ಜೋಹರ್ ನಿರ್ಮಾಣದ ಮೂಲಕ ಸಾರಾ ಬಾಲಿವುಡ್‌ಗೆ ಎಂಟ್ರಿ ಪಡೆಯುತ್ತಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಇದು ಸಹಜವಾಗಿಯೇ ಎಲ್ಲೆಡೆ ಪ್ರಚಾರವನ್ನೂ ಪಡೆದಿತ್ತು. ಸಾರಾ ಹೃತಿಕ್ ಜೊತೆ ನಟಿಸುವುದಕ್ಕೆ ತೊಂದರೆಯಾಗಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕರಣ್ ಜೋಹರ್ ನಿರ್ಮಾಣದ ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ಸಾರಾ ಬಾಲಿವುಡ್ ಪ್ರವೇಶಿಸಬೇಕಾಗಿತ್ತು. ಈ ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶನ ಮಾಡಲು ಸಿದ್ದತೆಯೂ ನಡೆದಿತ್ತು.
ಚಿತ್ರದಲ್ಲಿ ಇಬ್ಬರು ನಾಯಕಿಯರ ಪೈಕಿ ಸಾರಾ ಕೂಡ ಒಬ್ಬರಾಗಿದ್ದರು. ಮೊದಲು ಒಪ್ಪಿಕೊಂಡು ಆನಂತರ ಚಿತ್ರ ತಂಡದಿಂದ ಹೊರ ಬಂದಿದ್ದಾರೆ. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲ.
ಚಿತ್ರದಿಂದ ಹೊರ ಬಂದ ಬಳಿಕ ಸಾರಾಗೆ ಅನೇಕ ಆಫರ್‌ಗಳು ಬಂದಿವೆಯಂತೆ. ಆದರೆ ಸಾರಾ ಇದುವರೆಗೂ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಪುತ್ರಿಗೆ ಬಾಲಿವುಡ್ ಚಿತ್ರದಲ್ಲಿ ಅವಕಾಶ ಸಿಗಲಿದೆ ಎಂದು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ತಾಯಿ ಅಮೃತಾ ಸಿಂಗ್‌ಗೆ ಈ ಘಟನೆಯಿಂದ ಬಾರೀ ನೋವಾಗಿದೆಯಂತೆ.
ಚಿತ್ರದಿಂದ ಮಗಳನ್ನು ಕೈಬಿಟ್ಟಿರುವ ಬಗ್ಗೆ ತಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮಾಹಿತಿ ಪಕ್ಕಾ ಆದ ಮೇಲೆ ಮುಂದೆ ಏನು ಮಾಡಬೇಕೆನ್ನುವುದನ್ನು ನಿರ್ಧರಿಸುತ್ತೇವೆ. ಮಗಳನ್ನು ಒಳ್ಳೆಯ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸುವ ಇರಾದೆಯನ್ನು ಅಮೃತಾ ಹೊಂದಿದ್ದಾರೆ.

 

Leave a Comment