ಹೂಲಿಕೇರಿಯಲ್ಲಿ ಉಚಿತ ಸ್ಯಾನಿಟೈಜರ ವಿತರಣೆ

ಅಳ್ನಾವರ, ಏ 3- ಮಹಾಮಾರಿ ಕೊರೊನಾ ಸೋಂಕು ತಡೆಗೆ ಬಳಸುವ ಸ್ಯಾನಿಟೈಜರ್ ಬಾಟಲಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿದ ಕಡಬಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದಸಗರೀಸಾಬ ಹುನಶೀಕಟ್ಟಿ ಹೂಲಿಕೇರಿ ಗ್ರಾಮಸ್ಥರಿಗೆ ಉಚಿತ ಹಂಚಿಕೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಗ್ರಾಮದ ಮನೆ ಮನೆಗೆ ತರಳಿ ಜನರ ಕೈಗೆ ಎರಡು ಹನಿ ಸ್ಯಾನಿಟೈಜರ ಹಾಕಿ ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ತಿಳಿಸಿದ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರು ಸದಾ ಜಾಗುರಕರಾಗಿರಬೇಕು. ಸ್ಯಾನಿಟೈಜರ ನಿಯಮಿತವಾಗಿ ಕೈಗೆ ಹಚ್ಚಿಕೊಂಡು ವೈರಸ್ ಬಾರದ ಹಾಗೆ ತಡೆಗಟ್ಟಬೇಕು ಎಂದರು.
ಪ್ರತಿಯೊಬ್ಬರು ಮನೆಯಿಂದ ಹೊರಗೆ ಬರಬಾರದು.ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲನೆ ಮಾಡಿ. ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಅವಶ್ಯಕ ಸಾಮಗ್ರಿ ಖರಿದಿಸಲು ಹೊರಗೆ ಅನಿವಾರ್ಯವಾಗಿ ಬಂದರೆ ಜನರು ಮಧ್ಯೆ ಅಂತರ ಕಾಯ್ದುಕೊಳ್ಳಬೇಕು ಎಂದರು.
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಅನವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ, ಕೊರೊನಾ ವೈರಾಣು ಬಗ್ಗೆ ಜಾಗೃತಿ ಇರಬೇಕು. ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮ ಅನುಸರಿಸಬೇಕು, ವೃದ್ದರು ಮನೆಯಿಂದ ಹೊರಗೆ ಬರಬಾರದು ,ಕೊರೊನಾ ಸೋಂಕಿಗೆ ಔಷದಿ ಕಂಡು ಹಿಡಿದಿಲ್ಲ ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಯಾರಿಗಾದರೂ ಜ್ವರ, ನೆಗಡಿ, ಕೆಮ್ಮು ಬಂದಲ್ಲಿ ತಕ್ಷಣ ಆರೈಕೆ ಪಡೆಯಿರಿ. ಪ್ರಂಪಂಚದಲ್ಲಿ ಮರಣ ಮೃದಂಗ ಬಾರಿಸಿರುವ ಭಯಾನಕ ವೈರಸ್ ಕೊರೋನಾ ಹೋಗಲಾಡಿಸಲು ಸ್ಯಾನಿಟೈಜರ್ ಬಳಕೆ ಅವಶ್ಯ. ಅದನ್ನು ಮನಗಂಡು ಸ್ವಂತ ಖರ್ಚಿನಲ್ಲಿ ಈ ಬಾಟಲಿಗಳನ್ನು ಖರಿದಿಸಿ ಜನರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಇದರ ಲಾಭ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ, ಜನರ ಜೀವ ಉಳಿಸಿ ಎಂದು ಜನರಲ್ಲಿ ಹುನಶೀಕಟ್ಟಿ ಧೈರ್ಯ ತುಂಬಿದರು.
ಮುರಗೇಶ ಇನಾಂದಾರ, ವಿನಾಯಕ ಕುರುಬರ, ಗುರುರಾಜ ಸಬನೀಸ್, ಬಸವರಾಜ ನರಗುಂದ , ಅಬುಬಕರ್ ನದಾಫ್, ನಿಸಾರಅಹ್ಮದ್ ದಾದುನವರ, ಆಲಂ ಕಸಮಳಗಿ, ಶಿವಾನಂದ ಕದಂಬನ್ನವರ, ಆಶಾ ಕಾರ್ಯಕರ್ತೆ ನಿರ್ಮಲಾ ಹಬ್ಬನ್ನವರ, ಇಸಾಕ ಅಂಚಿ, ಜಮಾಲಸಾಬ ಮುನವಳ್ಳಿ ಇದ್ದರು.

Leave a Comment