ಹುರಿಕೇನ್ ಚಂಡ ಮಾರುತ ದ್ವೀಪವೇ ನಾಪತ್ತೆ

  • ಉತ್ತನೂರು ವೆಂಕಟೇಶ್

ಹವಾಯಿ ದ್ವೀಪಗಳ ಪೂರ್ವದಂಚಿನ ದ್ವೀಪವನ್ನು ಸಮೂಹದ ದ್ವೀಪವೊಂದು ಹುರಿಕೇನ್ ದಂತಹ ಪ್ರಬಲ ಚಂಡ ಮಾರುತದಿಂದಾಗಿ ಅಸ್ತಿತ್ವವನ್ನೇ ಕಳೆದುಕೊಂಡು ಈ ಭೂಭಾಗದಿಂದಲೇ ನಾಪತ್ತೆಯಾಗುತ್ತಿದೆ.

ಹುರಿಕೇನ್ ಚಂಡಮಾರುತದಿಂದ ಎದ್ದ ಬಿರುಗಾಳಿ ಮತ್ತು ಅಲೆಗಳ ಕಾರಣ ಹವಾಯಿ ದ್ವೀಪಗಳ ಪೂರ್ವದ ಅಂಚಿನಲ್ಲಿರುವ ದ್ವೀಪವೊಂದು ಕ್ರಮೇಣ ನಾಪತ್ತೆಯಾಗಿರುವುದು. ಈ ವಾರ ಬಿಡುಗಡೆಗೊಂಡಿರುವ ಉಪಗ್ರಹ ಚಿತ್ರಗಳಿಂದ ತಿಳಿದು ಬರುತ್ತದೆ. ಅಮೆರಿಕಾದ ಮತ್ಸ್ಯ ಮತ್ತು ವನ್ಯಜೀವಿ ಸೇವಾ ವಿಭಾಗ ಸೆರೆ ಹಿಡಿದಿರುವ ಹವಾಯಿ ದ್ವೀಪ ಸಮೂಹದ ಹಿಂದಿನ ಹಾಗೂ ಈಗಿನ ಚಿತ್ರಗಳು ಮರಳು ದಿಣ್ಣೆಗಳಿಂದ ಕೂಡಿರುವ ದ್ವೀಪ ಕಣ್ಮರೆಯಾಗುತ್ತಿರುವುದನ್ನು ತೋರಿಸುತ್ತದೆ.

  • ಹುರಿಕೇನ್ ದಂತಹ ಪ್ರಬಲ ಚಂಡಮಾರುತಗಳಿಗೆ ಬರೀ ಪ್ರಾಣ ಹಾನಿ. ಆಸ್ತಿ ಪಾಸ್ತಿ ನಷ್ಟ ಅಷ್ಟೇ ಅಲ್ಲ, ಸಣ್ಣ ಪುಟ್ಟ ದ್ವೀಪಗಳು ಜಲ ಸಮಾಧಿಯಾಗುತ್ತವೆ. ಇತ್ತೀಚೆಗೆ ಬಿಡುಗಡೆಯಾಗಿರುವ ಉಪಗ್ರಹಗಳ ಚಿತ್ರಗಳು, ಕ್ರಮೇಣ ಕಣ್ಮರೆಯಾಗುತ್ತಿರುವ ಭೂಭಾಗ ಮತ್ತು ದ್ವೀಪಗಳ ಕುರಿತಂತೆ ಆತಂಕ ಮೂಡಿಸುತ್ತದೆ.ಹವಾಯಿ ದ್ವೀಪಗಳ ಪೂರ್ವದ ಅಂಚಿನ ದ್ವೀಪವೊಂದು ಹುಲಿಕೇನ್ ಚಂಡ ಮಾರುತಕ್ಕೆ ಕಣ್ಮರೆಯಾಗುತ್ತಿದೆ. ಎಂಬುದು ಅಮೆರಿಕಾದ ಮತ್ಸ್ಯ ಮತ್ತು ಮತ್ತು ವನ್ಯಜೀವಿ ಸೇವಾ ವಿಭಾಗ ಈ ಹಿಂದೆ ತೆಗೆದಿದ್ದ ಹವಾಯಿ ದ್ವೀಪಗಳ ಚಿತ್ರ ಮತ್ತು ಈಗ ತೆಗೆದಿರುವ ಅದೇ ದ್ವೀಪದ ಚಿತ್ರಗಳು ತೋರಿಸುತ್ತವೆ.ಈ ಎಲ್ಲಾ ನೈಸರ್ಗಕ ವಿಕೋಪಗಳಿಗೆ ಕಾರಣವಾಗಿರುವ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ ಎಲ್ಲಾ ರಾಷ್ಟ್ರಗಳು ಮುಂದಾಗಿವೆ. ಆದರೆ ಈ ಯತ್ನ ನಿಗದಿತ ಆದಿಯಲ್ಲಿ ಸಾಗುತ್ತಿಲ್ಲ. ಎಂಬುದೇ ಆತಂಕದ ವಿಷಯ.

2vichara2

ಎಂದು ಹೊನಲುಲುನಲ್ಲಿರುವ ಹವಾಯಿ ವಿಶ್ವ ವಿದ್ಯಾನಿಲಯದ ಹವಾಮಾನ ವಿಜ್ಞಾನಿ ಚೀಪ್ ಫ್ಲೆಚರ್ ಹೌಹಾರಿದ್ದಾರೆ.

ಹೀಗೆ ಪ್ರಬಲ ಚಂಡ ಮಾರುತ ಹಾಗೂ ತೀವ್ರತರ ತಾಪಮಾನ ಏರಿಕೆಯಿಂದ ಮುಂದಿನ ದಿನಗಳಲ್ಲಿ ಈಗಿರುವ ದ್ವೀಪಗಳು, ಹಿಮ ಬಂಡೆಗಳು ಮತ್ತು ಭೂ ಭಾಗಗಳು ಮುಂದೆ ಕಣ್ಮರೆಯಾದರೇ ಆಶ್ಚರ್ಯವಿಲ್ಲ. ದ್ವೀಪಗಳು ಜಲ ಸಮಾಧಿಯಾಗುವ ಮೂಲಕ ಅಲ್ಲಿಯ ವನ್ಯಜೀವಿ ಹಾಗೂ ಜೈವಿಕ ವಾತಾವರಣವೇ ನಾಶ ವಾಗುತ್ತದೆ ಎಂದು ಫ್ಲೆಚರ್ ಆತಂಕ ವ್ಯಕ್ತಪಡಿಸಿದ್ದಾರೆ.

ಹವಾಯಿ ದ್ವೀಪಗಳ ಪೂರ್ವದ ಅಂಚಿನ ಭಾಗದಲ್ಲಿ ಚಿಕ್ಕ ಚಿಕ್ಕ ದ್ವೀಪಗಳ ಸಮೂಹವಿದೆ. ಈ ದ್ವೀಪಗಳಲ್ಲಿ ಕೆಲವೊಂದು ದ್ವೀಪಗಳ ಉದ್ದ ಸುಮಾರು ೧ ಕಿ.ಮೀ. ಮತ್ತು ಅಗಲ ೪೦೦ ಮಿ. ನಷ್ಟು ಚಿಕ್ಕದಾಗಿವೆ. ಪ್ರಬಲ ಚಂಡ ಮಾರುತ ಹಾಗೂ ತಾಪಮಾನ ಏರಿಕೆಯಿಂದ ಈಗಾಗಲೇ ಅಂಟಾರ್ಟಿಕಾದ ಯುವ ಬಂಡೆಗಳು ಹಿಮಾಲಯ ಭಾಗದ ಹಿಮ ಬಂಡೆಗಳು ಕ್ರಮೇಣ ಕರಗುತ್ತಿವೆ. ಇದರಿಂದಾಗಿ ಸಾಗರದ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಅದರ ತಟ್ಟವರ್ತಿ ಭೂ ಭಾಗಗಳು ಸಮುದ್ರದಲ್ಲಿ ಸೇರಿ ಹೋಗುತ್ತವೆ.

ಇಂತಹ ನೈಸರ್ಗಿಕ ವಿನಾಶಕಾರಿ ಕ್ರಿಯೆಗಳಿಗೆ ಕಾರಣವಾಗಿರುವ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ ವಿಜ್ಞಾನಿಗಳ ಸಮೂಹ ಜಾಗತಿಕವಾಗಿ ಕಟ್ಟೆಚ್ಚರಿಕೆ ನೀಡುತ್ತಿದ್ದರೂ ತಾಪಮಾನ ತಡೆಯುವ ಯತ್ನ ನಿಗದಿತ ಹಾದಿಯಲ್ಲಿ ಸಾಗುತ್ತಿಲ್ಲ. ತಾಪಮಾನ ಏರಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿಯೇ ಫ್ಯಾರಿಸ್ ನಲ್ಲಿ ಈ ಹಿಂದೆ ನಡೆದ ಹವಾಮಾನ ಶೃಂಗದಲ್ಲಿ ಜಾಗತಿಕ ರಾಷ್ಟ್ರಗಳು ಒಂದು ಒಪ್ಪಂದಕ್ಕೆ ಬಂದು ಸಹಿ ಹಾಕಿವೆ. ಆದರೆ  ಸಹಿ ಹಾಕಿರುವ ಪ್ರಮುಖ ರಾಷ್ಟ್ರವಾಗಿರುವ ಅಮೆರಿಕಾವೇ ಆ ಒಪ್ಪಂದದಿಂದ ಈಗ ಹಿಂದೆ ಸರಿದಿದೆ. ಬರಾಕ್ ಒಬಾಮ ಕಾಲದಲ್ಲಿ ಆಗಿದ್ದ ಈ ಒಪ್ಪಂದದಿಂದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ.

ತಾಪಮಾನ ಏರಿಕೆ ತಡೆಗಟ್ಟುವ ಯತ್ನಕ್ಕೆ ಇದು ಭಾರೀ ಹಿನ್ನಡೆಯಾಗಿದೆ.

Leave a Comment