ಹುಬ್ಬಿನ ಅಂದಕ್ಕೆ ಸರಳ ಮನೆಮದ್ದು

*ಹರಳೆಣ್ಣೆಯಲ್ಲಿ ಕ್ಯೂ ಟಿಪ್ ನ್ನು ಮುಳುಗಿಸಿ, ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ಕಣ್ಣುಗಳ ಹುಬ್ಬಿನ ಸುತ್ತಲು ಹಚ್ಚಿ. *೪೦-೪೫ ನಿಮಿಷ ಕಾಲ ಹಾಗೆ ಬಿಡಿ. ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ದಿನದಲ್ಲಿ ಒಂದು ಸಲ ಬಳಸಿದರೆ ಹುಬ್ಬಿನ ಕೂದಲು ಬೆಳೆಯುವುದು.

* ೧/೨ ಚಮಚ ಮೆಂತೆ ಕಾಳುಗಳನ್ನು ಹುಡಿ ಮಾಡಿ ೨ ಚಮಚ ನೀರು ಹಾಕಿ ಅದರ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. ೪೦-೪೫ ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ. ವಾರದಲ್ಲಿ ೩-೪ ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ.
*ಹಸಿ ಹಾಲಿನಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ. ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ. ೨೦-೨೫ ನಿಮಿಷ ಕಾಲ ಇದನ್ನು ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ ೨-೩ ಸಲ ಹೀಗೆ ಮಾಡಿ.

*ಒಂದು ಈರುಳ್ಳಿ ರಸ ತೆಗೆಯಿರಿ. ಈ ರಸದಲ್ಲಿ ಕ್ಯೂ ಟಿಪ್ ಮುಳುಗಿಸಿ ಹುಬ್ಬುಗಳಿಗೆ ಸರಿಯಾಗಿ ಈ ರಸ ಹಚ್ಚಿಕೊಳ್ಳಿ. ೨೦ ನಿಮಿಷ ಕಾಲ ಇದನ್ನು ಹಾಗೆ ಬಿಡಿ. *ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ತೊಳೆಯಿರಿ. ಹುಬ್ಬಿನ ಕೂದಲು ಬೇಗನೆ ಬೆಳೆಯಬೇಕು ಎಂದಾದರೆ ವಾರದಲ್ಲಿ ೪-೫ ಸಲ ಇದನ್ನು ಬಳಸಲು ಮರೆಯಬೇಡಿ

Leave a Comment