ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಆಗ್ರಹ

ಧಾರವಾಡ,ಫೆ.15- ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮಹಾಮಹಿಮ ಶ್ರೀ ಸಿದ್ಧಾರೂಢರ ಹೆಸರನ್ನಿಡುವಂತೆ ಆಗ್ರಹಿಸಿ ತಾಲೂಕಿನ ನರೇಂದ್ರ ಗ್ರಾಮಸ್ಥರು ಸರಕಾರವನ್ನು ಆಗ್ರಹಿಸಿದರು.
ಶನಿವಾರ ಗ್ರಾಮದಿಂದ ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪವಾಡಪುರುಷ ಸಿದ್ಧಾರೂಢರು ಯಾವುದೇ ಧರ್ಮ,ಜಾತಿಗೆ ಸೀಮಿತರಾದವರಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂದು ಸಾರಿದವರು. ಇದರಿಂದಾಗಿ ಅವರು ಈ ಭಾಗದ ಜನರ ಹೃದಯದಲ್ಲಿ ಇಂದಿಗೂ ನೆಲೆಸಿರುವ ಮಹಾತ್ಮರಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಸಿದ್ಧಾರೂಢರ ಅಸಂಖ್ಯಾತ ಭಕ್ತರಿದ್ದಾರೆ. ವಿಮಾನ ನಿಲ್ದಾಣಕ್ಕೆ ಅವರ ಹೆಸರಿನ್ನಿಡುವ ಮೂಲಕ ಸಿದ್ಧಾರೂಢರ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮನವೊಲಿಸಿ ಸಿದ್ಧಾರೂಢರ ಹೆಸರನ್ನಿಡಲು ಪ್ರಯತ್ನಿಸಬೇಕು. ಈ ಮುಖಾಂತರ ಭಕ್ತರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷ ಈರಪ್ಪ ಗಂಟಿ, ಸದಸ್ಯರಾದ ಈಶ್ವರ ಗಾಣಿಗೇರ,
ಮಂಜುನಾಥ ತಿರ್ಲಾಪೂರ, ಈರಪ್ಪ ತೇಗೂರ, ಬಸವರಾಜ ಸೋಗಿ, ಜಿಪಂ ಸದಸ್ಯ ಕರೆಪ್ಪ ಮಾದರ, ಎಪಿಎಂಸಿ ಸದಸ್ಯ ಚೆನವೀರಗೌಡ ಪಾಟೀಲ, ಹಿರಿಯರಾದ ಗಂಗಪ್ಪ ಮೊರಬ, ಶಂಕರ ಈಳಿಗೇರ, ವಿಜಯ ದೇಶಮುಖ, ಸುದತ್ತ ಮುತಾಲಿಕದೇಸಾಯಿ, ಮಡಿವಾಳಪ್ಪ ಕಪಲಿ, ಶಂಕರ ಕೊಮಾರದೇಸಾಯಿ, ಕಣಿ ಈಳಿಗೇರ, ಮಹಾವೀರ ಹೊಸಮನಿ, ಷಣ್ಮುಖ ಲಾಳಸಂಗಿ, ಈರಯ್ಯ ಪೂಜಾರ, ಸಂಗಮೇಶ ಮದರ, ಈರಪ್ಪ ಬೆಳ್ಳಕಟ್ಟಿ, ಕಲ್ಲನಗೌಡ ಪಾಟೀಲ, ಈಶ್ವರ ಆಯಗಾರ, ಮಂಜುನಾಥ ವೆಂಕಟಾಪೂರ, ವಿನಾಯಕ ಪತ್ತಾರ, ಬಸವರಾಜ ಹೊಯಗುಡ್ಡಿ, ಯಲ್ಲಪ್ಪ ಪಮ್ಮಣ್ಣವರ, ಸೇರಿದಂತೆ ನೂರಾರು ಜನರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

Leave a Comment