ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 8 ಸ್ಪೋಟಕ ವಸ್ತುಗಳು ಪತ್ತೆ- ಹೈ ಅಲರ್ಟ್ ಘೋಷಣೆ

ಹುಬ್ಬಳ್ಳಿ : ಇದೀಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ನಂ.1ರಲ್ಲಿನ ಸ್ಟೇಷನ್ ಮಾಸ್ಟರ್ ರೂಂನಲ್ಲಿದ್ದ ಪಾರ್ಸೆಲ್ ಸ್ಟೋಟಕ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಪಾರ್ಸೆಲ್ ಒಪನ್ ಮಾಡುತ್ತಿದ್ದಂತೆ ಸ್ಟೋಟಗೊಂಡು ಕೈ ಚಿದ್ರವಾದ ಪಾರ್ಸೆಲ್ ಶಿವಸೇನೆಯ ಶಾಸಕ ಪ್ರಕಾಶ್ ಅಬೀತ್ಕರ್ ಹೆಸರಿನಲ್ಲಿ ಬಂದಿದ್ದು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಇಂದು ಪಾರ್ಸಲ್ ಒಪನ್ ಮಾಡುವ ವೇಳೆ ಹುಸೇನ್ ಸಾಬ್ ಎಂಬುವರ ಕೈ ಚಿದ್ರವಾಗಿತ್ತು. ಪಾರ್ಸಲ್ ನೋಡಿದ್ದ ಆರ್ ಪಿ ಎಫ್ ಅಧಿಕಾರಿಯೊಬ್ಬರು ಬಾಕ್ಸ್ ತೆಗೆಯಲು ಹೇಳಿದ್ದಕ್ಕೆ ಹುಸೇನ್ ಸಾಬ್ ಬಾಕ್ಸ್ ಹೊರಗಡೆಯಿಂದ ನೋಡಿದಾಗ ನಿಂಬೆಹಣ್ಣುಗಳಿದ್ದ ಬಾಕ್ಸ್ ಎಂಬುದಾಗಿ ಗೆಸ್ ಮಾಡಿ ಒಪನ್ ಮಾಡಿದ್ದು. ಈ ವೇಳೆ ಪಾರ್ಸಲ್ ಸ್ಟೋಟಗೊಂಡು ತಮ್ಮ ಕೈ ಕಳೆದುಕೊಂಡಿದ್ದರು.

rl rl1

ಈ ಘಟನೆಯ ಬಳಿಕ ಸ್ಟೋಟಕದ ಸುತ್ತ ಜಾಲಾಡಿದ ಪೊಲೀಸರಿಗೆ ಪಾರ್ಸಲ್ ಯಾರ ಹೆಸರಿನಲ್ಲಿತ್ತು..? ರೈಲ್ವೆ ಪ್ರಯಾಣಿಕರು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದೇಗೆ ಎಂಬುದನ್ನು ಜಾಲಾಡಿದ್ದಾರೆ. ಈ ವೇಳೆ ಬಾಕ್ಸ್ ಮೇಲಿನ ಪಾರ್ಸಲ್ ತಲುಪಿಸ ಬಹುದಾದ ವಿಳಾಸ ಗಮನಿಸಿದಾಗ, ಪಾರ್ಸಲ್ ಶಿವಸೇನೆಯ ಶಾಸಕ ಪ್ರಕಾಶ್ ಅಬೀತ್ಕರ್ ಹೆಸರಿನಲ್ಲಿ ಬಂದಿತ್ತು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಈ ನಡುವೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟಕ 8 ವಸ್ತುಗಳು ಪತ್ತೆಯಾಗಿದೆ ಎನ್ನಲಾಗಿದ್ದು, ಸದ್ಯ ಪೊಲೀಸರು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಪರಿಶೀಲನೆ ನಡೆಸಲಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಸ್ಪೋಟಕ ವಸ್ತುಗಳು ಸಿಕ್ಕಿರುವ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್‌ ಅನ್ನು ಆಯೋಜಿಸಲಾಗಿದ್ದು, ಎಲ್ಲ ಕಡೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರನ್ನು ಚೆಕ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

 

ನೋ ಬಿಜೆಪಿ ನೋ ಕಾಂಗ್ರೆಸ್
ನೋ ಬಿಜೆಪಿ, ನೋ ಕಾಂಗ್ರೆಸ್ ಎಂದು ಬರೆದಿತ್ತು. ಹಂದಿ ಹಿಡಿಯುವ ವೇಳೆ ಬಳಸುವ ಸ್ಫೋಟಕ ಇದು ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಎಲೆಕ್ಷನ್ ಗೆ ಸಂಬಂಧಿಸಿರಬಹುದು ಎನ್ನಲಾಗುತ್ತಿದೆ.

Leave a Comment