ಹುಬ್ಬಳ್ಳಿ, ನೈರುತ್ಯ ರೈಲ್ವೆ ವಲಯದ ಸಭೆಯಲ್ಲಿ  ಸಂಸದರಾದ ಶ್ರೀರಾಮುಲು ಬಳ್ಳಾರಿ ಭಾಗದ ರೈಲ್ವೆ ಸಾರಿಗೆ ಅಭಿವೃದ್ದಿಯ ಬಗ್ಗೆ ಪ್ರಸ್ತಾಪ

ಬಳ್ಳಾರಿ, ಜ.11:ಕರ್ನಾಟಕದ ಸಂಸದರ ಜೊತೆ ಬಜೆಟ್ ಪೂರ್ವ ಸಮಾಲೋಚನಾ ಸಭೆಯನ್ನು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮೆನೇಜರ್ ರವರು ನಿನ್ನೆ ಕರೆದಿದ್ದರು. ಈ ಸಭೆಯಲ್ಲಿ ಬಳ್ಳಾರಿಯ ಸಂಸದರಾದ ಬಿ.ಶ್ರೀರಾಮುಲುರವರು ಭಾಗವಹಿಸಿ ಬಳ್ಳಾರಿ ಭಾಗದ ರೈಲ್ವೆ ಸಾರಿಗೆ ಅಭಿವೃದ್ದಿಯ ಬಗ್ಗೆ ಪ್ರಸ್ತಾಪಿಸಿ ರುವುದು ಸ್ವಾಗತಾರ್ಹ ವಿಚಾರ ಎಂದು ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ಮಹೇಶ್ವರಸ್ವಾಮಿ ತಿಳಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ಮಂಡನೆಯಾಗುವ ರೈಲ್ವೆ ಬಜೆಟ್ ನ ಪೂರ್ವದಲ್ಲಿ ಕರೆಯಲ್ಪಡುವ ಸಭೆಗಳಿಗೆ ನಮ್ಮ ಕರ್ನಾಟಕದ ಸಂಸದರು ಭಾಗವಹಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಸಾರಿಗೆ ಅಭಿವೃದ್ದಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಈ ಹಿನ್ನಲೆಯಲ್ಲಿ ಬಳ್ಳಾರಿ ಸಂಸದರಾದ ಶ್ರೀರಾಮುಲುರವರು, ಬಹುದಿನಗಳ ಬೇಡಿಕೆಯಾಗಿರುವ ಹೊಸಪೇಟೆ-ಬೆಂಗಳೂರು ಇಂಟರ್ ಸಿಟಿ ರೈಲು ಪ್ರಾರಂಭಿಸಿ ಅದನ್ನು ಮೈಸೂರಿಗೆ ವಿಸ್ತರಿಸುವುದು, ಗುಂತಕಲ್-ಗದಗ್-ಸೊಲ್ಲಾಪುರ ರೈಲು, ಹುಬ್ಬಳ್ಳಿ-ಗುಂತಕಲ್-ಗುಲ್ಬರ್ಗಾ ರೈಲುಗಳನ್ನು ಆರಂಭಿಸುವಂತೆ ನಮ್ಮ ಬಳ್ಳಾರಿಯ ಸಂಸದರು ಸಭೆಯಲ್ಲಿ ಆಗ್ರಹಿಸಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದಿದ್ದಾರೆ. ಆದಷ್ಟು ಶೀಘ್ರ ಈ ರೈಲುಗಳ ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರಲ್ಲಿ ಸಂಸದರಾದ ಶ್ರೀರಾಮುಲುರವರು ಪ್ರಭಾವ ಬೀರಲು ರೈಲ್ವೆ ಕ್ರಿಯಾಸಮಿತಿ ಕೋರುತ್ತದೆ.

ಸಿಂಧನೂರು-ಲಿಂಗಸೂಗೂರು ನೂತನ ಬ್ರಾಡ್ ಗೆಜ್ ಕೆಲಸ ಆರಂಭಿಸುವಂತೆ ಹಾಗೆಯೇ ಬಳ್ಳಾರಿ ರೈಲು ನಿಲ್ದಾಣವು ‘ಎ’ ದರ್ಜೆ ರೈಲು ನಿಲ್ದಾಣವಾಗಿದ್ದು ಜನತೆಯ ಅನುಕೂಲಕ್ಕೆ ಪ್ಲಾಟ್ ಪಾರಂಗಳಲ್ಲಿ ಸ್ವಯಂಚಾಲಿತ ಮೆಟ್ಟಲಿನ ವ್ಯವಸ್ಥೆಯಾದ ‘ಎಕ್ಸ್ ಲೇಟರ್’ ಸೌಲಭ್ಯ ಕೂಡಲೇ ಒದಗಿಸುವಂತೆ ಸಂಸದರಾದ ಶ್ರೀರಾಮುಲು ಸೂಚಿಸಿದರುದು ಸ್ವಾಗತಾರ್ಹ.

ಈ ಎಲ್ಲಾ ವ್ಯವಸ್ಥೆಗಳು 2017ನೇ ವರ್ಷದಲ್ಲಿ ಆರಂಭವಾಗಬೇಕೆಂದು ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒತ್ತಾಯಿಸುತ್ತೇವೆ. ಹೊಸಪೇಟೆ-ಬೆಂಗಳೂರು-ಮೈಸೂರು ಇಂಟರ್ ಸಿಟಿ ರೈಲಿನ ಆರಂಭಕ್ಕೆ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಕುಂಟು ನೆಪ ಒಡ್ಡಿ ನಿರಾಸಕ್ತಿ ತೋರುತ್ತಿರುವುದು ಖಂಡನೀಯ. ಕೂಡಲೇ ಈ ರೈಲು ಸಹ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ಸಂಸದ ಶ್ರೀರಾಮುಲುರವರು ಪ್ರಯತ್ನಿಸಬೇಕು ಕೆ.ಎಂ.ಮಹೇಶ್ವರಸ್ವಾಮಿ ಒತ್ತಾಯಿಸಿದ್ದಾರೆ.

Leave a Comment