ಹುಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್

ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ಹುಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳಿಗೆ ಪ್ರಮುಖ ವೀಕ್ಷಣಾ ಸಾಧನವಾಗಿದೆ.

ಬಾಹ್ಯಾಕಾಶ ಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳಿಗೆ ಹುಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ಅತಿ ಪ್ರಮುಖ ವೀಕ್ಷಣಾ ಸಾಧನವಾಗಿದೆ.

ಅಮೆರಿಕಾದ ನಾಸಾ ಅಭಿವೃದ್ಧಿಪಡಿಸಿರುವ ಈ ಟೆಲಿಸ್ಕೋಪ್ ಅತಿ ದೊ‌‌ಡ್ಡದು ಹಾಗೂ ಅತಿ ನಿಖರ ವೀಕ್ಷಣೆಯನ್ನು ಮಾಡಿ ಮಾಹಿತಿ ಒದಗಿಸಬಲ್ಲದು.

ಹತ್ತಿರದ ಭೂಕಕ್ಷೆಗೆ 1990 ರಲ್ಲಿ ಹಾರಿದ ಈ ಟೆಲಿಸ್ಕೋಪ್ ಗಂಟೆಗೆ 17,000 ಮೈಲುಗಳ ವೇಗದಲ್ಲಿ ಭೂಮಿಯನ್ನು ಸುತ್ತುತ್ತಾ ಬಾಹ್ಯಾಕಾಶ ವೀಕ್ಷಣೆಯಲ್ಲಿ ತೊಡಗಿದೆ.

ಗ್ರಹಗಳು, ನಕ್ಷತ್ರಗಳು, ನಕ್ಷತ್ರ ಮಂಡಲಗಳ, ಸೌರ ಮಂಡಲಗಳ ವೀಕ್ಷಣೆಯನ್ನು 1.3 ದಶಲಕ್ಷ ಬಾರಿ ನ‌ಡೆಸಿ ಭೂಮಿಗೆ ರವಾನಿಸಿರುವ ಮಾಹಿತಿ ಆಧಾರದಲ್ಲಿ ಬಂದಿರುವ ವೈಮಾನಿಕ ಲೇಖನಗಳ ಸಂಖ್ಯೆ 14,000.

ಶಾಲಾ ಬಸ್ ಗಾತ್ರದ ಹುಬ್ಬಲ್ ಟೆಲಿಸ್ಕೋಪ್ ವೀಕ್ಷಣೆಯಲ್ಲಿ ಈವರೆಗೆ 4 ಶತಕೋಟಿ ಮೈಲಿಗಳನ್ನು ಕ್ರಮಿಸಿದೆ.

ಶತಕೋಟಿ ಮೈಲಿಗಳ ದೂರದಲ್ಲಿರುವ ಈವರೆವಿಗೂ ಖಗೋಳ ವಿಜ್ಞಾನಿಗಳ ಕಣ್ಣಿಗೆ ಬೀಳದ ಹೊಸಗ್ರಹ ನಕ್ಷತ್ರ ಮಂಡಲಗಳನ್ನು ಇದರ ಮೂಲಕ ಪತ್ತೆ ಹಚ್ಚಲಾಗಿದೆ.

ಹತ್ತಿರದ ಭೂಕಕ್ಷೆಯಲ್ಲಿಯೇ ನೆಲೆಗೊಳಿಸಿರುವ ಈ ಹುಬ್ಬಲ್ ಟೆಲಿಸ್ಕೋಪ್ ಭೂಮಿಯನ್ನು ಸುತ್ತಲೂ, ಆಕಾಶದ ಸುತ್ತಲೂ ಸದಾ ಕಣ್ಣು ನೆಟ್ಟು ದೂರದೂರ ಗ್ರಹ, ನಕ್ಷತ್ರಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ.

1990 ಏಪ್ರಿಲ್ 24 ರಂದು ಬಾಹ್ಯಾಕಾಶಕ್ಕೆ ಕಾಲಿಟ್ಟ ಈ ಟೆಲಿಸ್ಕೋಪ್ ಇದುವರೆಗೆ 4 ಶತಕೋಟಿ ಮೈಲಿಗಳ ಹಾದಿಯನ್ನು ಕ್ರಮಿಸಿದೆ. ಗಂಟೆಗೆ 17 ಸಾವಿರ ಮೈಲುಗಳ ವೇಗದಲ್ಲಿ ಭೂಮಿಯನ್ನು ಸುತ್ತುವ ಇದು ವೀಕ್ಷಿಸಿ ಕಳುಹಿಸಿರುವ ಮಾಹಿತಿಗಳ ಆಧಾರದಲ್ಲಿ ಪ್ರಕಟವಾಗಿರುವ ವೈಜ್ಞಾನಿಕ ಲೇಖನಗಳ ಸಂಖ್ಯೆ 14 ಸಾವಿರ.

ವೀಕ್ಷಣೆ ಮತ್ತು ಮಾಹಿತಿ ರವಾನೆ ಕಾರ್ಯದಲ್ಲಿ ಸತತವಾಗಿ ನಿರತವಾಗಿರುವ ಹುಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ಖಗೋಳ ಶೋಧನಾ ವಿಜ್ಞಾನಿಗಳಿಗೆ ಒಂದು ವರವಾಗಿದೆ ಎನ್ನಬಹುದು.

ವಿಶೇಷ

ಹುಬ್ಬಲ್ ಟೆಲಿಸ್ಕೋಪ್‌ನ ವಿಶೇಷವೆಂದರೆ, ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತುತ್ತಲೇ ಬಾಹ್ಯಾಕಾಶ ವೀಕ್ಷಣೆ ನಡೆಸುವುದು.

ಈವರೆಗಿನ ಟೆಲಿಸ್ಕೋಪ್‌ಗಳಲ್ಲಿ ಭೂಮಿಯಿಂದಲೇ ಗ್ರಹ, ನಕ್ಷತ್ರಗಳ ವೀಕ್ಷಣೆ ನಡೆಸಲಾಗುತ್ತಿದೆ. ಭೂಮಿ ಮೇಲಿನ ಹವಾಮಾನ, ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯಗಳಿಂದ ಬಾಹ್ಯಾಕಾಶದಿಂದ ಬರುವ ಬೆಳಕನ್ನು ತಡೆಯುವುದರಿಂದ ನಿಖರ ವೀಕ್ಷಣೆಗೆ ತೊಡಕು.

ಈ ಲೋಪದ ಹಿನ್ನೆಲೆಯಲ್ಲಿಯೇ ಬಾಹ್ಯಾಕಾಶದಲ್ಲೇ ಟೆಲಿಸ್ಕೋಪ್ ನೆಲೆಯೂರುವಂತೆ ಮಾಡಿ ಅದರಿಂದ ಹೊಸಗ್ರಹಗಳ , ನಕ್ಷತ್ರಗಳ, ನಕ್ಷತ್ರ ಮಂಡಲಗಳ ವೀಕ್ಷಣೆ ನಡೆಸುವ ಹಿನ್ನೆಲೆಯಲ್ಲಿಯೇ ನಾಸಾ ಹುಬ್ಬಲ್‌ನಂತರ ಟೆಲಿಸ್ಕೋಪ್ ಅನ್ನು ಅಭಿವೃದ್ಧಿಪಡಿಸಿದೆ.

ಇದುವರೆವಿಗೆ 1.3 ದಶಲಕ್ಷ ಬಾರಿ ವೀಕ್ಷಣೆ ನಡೆಸಿರುವ ಹುಬ್ಬಲ್ ಹೊಸ ಸೌರಮಂಡಲ, ನಕ್ಷತ್ರ ಮಂಡಲಗಳನ್ನು ಪತ್ತೆ ಹಚ್ಚಿದೆ. ದೊಡ್ಡ ದೊಡ್ಡ ನಕ್ಷತ್ರಗಳು ಉರಿಯುವುದನ್ನು, ಧೂಮಕೇತುಗಳು ಚೂರಾಗುವುದು, ಬ್ಲಾಕ್ ಹೋಲ್‌ಗಳು, ಇತರೆ ಆಕಾಶಕಾಯಗಳ ಕುರಿತಂತೆ ಹೊಸ ಮಾಹಿತಿಗಳನ್ನು ಒದಗಿಸಿದೆ.

ಡಿಜಿಟಲ್ ಕ್ಯಾಮರಾಗಳನ್ನು ಬಳಸಿ ವೀಕ್ಷಣೆ ನಡೆಸುವ ಹುಬ್ಬಲ್, ರೇಡಿಯೊ ತರಂಗಗಳ ಮೂಲಕ ಬಾಹ್ಯಾಕಾಶದ ನಿಖರ ಮಾಹಿತಿಯನ್ನು ರನಾನಿಸುತ್ತ ಬಂದಿದೆ.

ಮುಂದೆ

ಅಮೆರಿಕ ಹುಬ್ಬಲ್‌ಗಿಂತಲೂ ಅತಿಹೆಚ್ಚು ನಿಖರವಾದ ಟೆಲಿಸ್ಕೋಪ್‌ನ ಅಭಿವೃದ್ಧಿ ನಡೆಸುತ್ತಿದೆ. ಅದೇ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಇದು ಹುಬ್ಬಲ್ ಟೆಲಿಸ್ಕೋಪ್‌ನಂತೆ ಭೂಮಿಯನ್ನು ಸುತ್ತುವುದಿಲ್ಲ. ಬದಲಿಗೆ ಸೂರ್ಯನನ್ನು ಸುತ್ತಿ ಬಾಹ್ಯಾಕಾಶ ವೀಕ್ಷಣೆ ನಡೆಸುತ್ತದೆ.

-ಉತ್ತನೂರು ವೆಂಕಟೇಶ್

 

Leave a Comment