ಹುದ್ದೆಭರ್ತಿಯಲ್ಲಿ ಹೈಕಭಾಗಕ್ಕೆ ಅನ್ಯಾಯ

ಕಲಬುರಗಿ ಫೆ 13: ಸಂವಿಧಾನದ 371(ಜೆ) ತಿದ್ದುಪಡಿ ಅನುಸಾರ ಹೈಕ ಭಾಗಕ್ಕೆ ಸಿಗಬೇಕಾದ ಸರಕಾರದ ಹುದ್ದೆ ದೊರೆಯುತ್ತಿಲ್ಲ ಎಂದು ಹೈಕ ಹೋರಾಟ ಸನಿತಿ ಅಧ್ಯಕ್ಷ ಮಾಜಿ ಸಚಿವ ವೈಜನಾಥ ಪಾಟೀಲ ಅವರು  ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು

ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದ್ದಾಗಿ ಹೇಳಿದರು

ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹೈಕ ಭಾಗಕ್ಕೆ ಕಾದಿರಿಸಿದ ಸಂಖ್ಯೆ ಪ್ರಕಟಿಸಿರಲಿಲ್ಲ ಮೂರು ವರ್ಷದ ಪರಿಶ್ರಮದ ನಂತರ ನ್ಯಾಯಾಲಯದಿಂದ ನ್ಯಾಯ ಪಡೆಯಬೇಕಾಯಿತು. 6022 ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ಈ ಭಾಗಕ್ಕೆ ಕಾದಿರಿಸಿದ ಹುದ್ದೆಗಳ ಸಂಖ್ಯೆಯನ್ನೂ ಪ್ರಕಟಿಸಿಲ್ಲ ಇಂತಹ ಹಲವಾರು ಉದಾಹರಣೆಗಳಿವೆ ಎಂದರು.

ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ನೀತಿ ಸಂಹಿತೆ ಪ್ರಕಟವಾದರೆ ಈ ನೇಮಕಾತಿ ಮತ್ತೆ ವಿಳಂಬವಾಗುತ್ತದೆ ಆದ್ದರಿಂದ 371(ಜೆ) ಲಾಭ ಸರಿಯಾಗಿ ಈ ಭಾಗದ ಜನರಿಗೆ ತಲುಪಬೇಕು  ಹುದ್ದೆಗಳು ಸಕಾಲದಲ್ಲಿ ಭರ್ತಿಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದೇನೆ ಎಂದರು

Leave a Comment