ಹುತಾತ್ಮ ಯೋಧನ ಪಾರ್ಥೀವ ಶರೀರ ಖಾನಾಪುರಕ್ಕೆ

ಬೆಳಗಾವಿ, ಜು 11- ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಯೋಧ ಸಂತೋಷ ಕೌರ ಪಾರ್ಥೀವ ಶರೀರವನ್ನು ಇಂದು ಖಾನಾಪುರ ಪಟ್ಟಣಕ್ಕೆ ತರಲಾಯಿತು.
ಕಳೆದ ದಿ. 9 ರಂದು ಛತ್ತೀಸಗಡದ ಕಂಕೇರಾದಲ್ಲಿ ನಡೆದ ನೆಲಬಾಂಬ್ ಸ್ಪೋಟದಲ್ಲಿ ಸಂತೋಷ ಸಾವನ್ನಪ್ಪಿದ್ದರು.
ಕಂಕೇರಾದಲ್ಲಿ ನಕ್ಸಲರು ಈ ನೆಲಬಾಂಬ್ ಸ್ಪೋಟಿಸಿದ್ದರು. ಯೋಧನ ಪಾರ್ಥೀವ ಶರೀರವನ್ನು ಖಾನಾಪುರಕ್ಕೆ ತರುತ್ತಿದ್ದಂತೆಯೇ ವೀರಘೋಷಗಳು ಎಲ್ಲೆಡೆ ಮೊಳಗಿದವು.

Leave a Comment