ಹುಣ್ಣಿಮೆಯಂದು ಚಂದ್ರನನ್ನು ಹಾದು ಹೋದದ್ದು ಅನ್ಯಗ್ರಹ ಜೀವಿಯೆ?

ಜನವರಿ ೩೧ ರಂದು ಪೂರ್ಣ ಹುಣ್ಣಿಮೆಯಂದು ಚಂದ್ರನನ್ನು ರೊಯ್ಯನೆ ಹಾದು ಹೋದದ್ದು ಅನ್ಯಗ್ರಹ ಜೀವಿ (ಏಲಿಯನ್) ಇರಬಹುದೆ ಎಂಬ ಕುತೂಹಲ ವಿಜ್ಞಾನಿಗಳಲ್ಲಿ ಮೂಡಿದೆ. ಕಳೆದ ತಿಂಗಳು ಬಾನಂಗಳದಲ್ಲಿ ನಡೆದ ಅದ್ಭುತ ಚಮತ್ಕಾರವಾದ ಬ್ಲಡ್‌ಮೂನ್ ಸಂಪೂರ್ಣ ಚಂದ್ರಗ್ರಹಣದ ಸಂದರ್ಭದಲ್ಲಿಯೇ ಅನ್ಯಗ್ರಹ ಜೀವಿ ಇರುವುದನ್ನು ಸಮರ್ಥಿಸುವಂತ ಚಮತ್ಕಾರವೊಂದು ನಡೆದಿದೆ.

ಮೊನ್ನೆ ಸೂಪರ್ ಮೂನ್ ಗ್ರಹಣ ಸಂದರ್ಭದಲ್ಲಿ ರಕ್ತವರ್ಣದ ಚಂದ್ರನ ಪಕ್ಕದಲ್ಲಿಯೇ ಬಿಳಿಯ ವಸ್ತುವೊಂದು ಶರವೇಗದಲ್ಲಿ ಸಾಗಿ ಹೋಗಿದೆ.
ಈ ಅದ್ಭುತ ದೃಶ್ಯವನ್ನು ಯೂಪೊಮಾನಿಯಾ ಸೆರೆ ಹಿಡಿದಿದ್ದು, ಅದನ್ನು ಯೂ ಟೂಬ್‌ನಲ್ಲಿ ಸೇರಿ ಬಿಟ್ಟಿದೆ.

ನಾಸಾ ಸೆರೆ ಹಿಡಿದಿರುವ ಗ್ರಹಣದ ದೃಶ್ಯಗಳಲ್ಲಿಯೂ ಈ ಬಿಳಿಯ ವಸ್ತು ಚಂದ್ರನನ್ನು ಮೇಲಿನಿಂದ ಕೆಳಗೆ ಅತಿ ರಭಸದಲ್ಲಿ ಹಾದು ಹೋಗುವುದು ಕಾಣುತ್ತದೆ.

ಇಷ್ಟೊಂದು ವೇಗದಲ್ಲಿ ಸಾಗಿ ಹೋದದ್ದು, ಅನ್ಯಗ್ರಹ ಜೀವಿ ಇರಬಹುದೆ ಎಂದು, ಅನ್ಯ ಗ್ರಹ ಜೀವಿಗಳ ಶೋಧನೆಯಲ್ಲಿರುವ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಅಂದು ಗ್ರಹಣಗ್ರಸ್ತ ಚಂದ್ರ ರಕ್ತವರ್ಣದಲ್ಲಿರುವ ಸಂದರ್ಭದಲ್ಲಿ ಚಂದ್ರನನ್ನು ಶರವೇಗದಲ್ಲಿ ಹಾದು ಹೋದ ಒಂದು ಅಪರೂಪದ ವಸ್ತುವನ್ನು ವೀಡಿಯೋದಲ್ಲಿ ಸೆರೆ ಹಿಡಿದಿರುವ ಅನ್ಯಗ್ರಹ ಜೀವಿ ಶೋಧನಾ ಚಾನಲ್ ಆದ ‘ಯೂ ಪೋ ಮಾನಿಯಾ’ ಅದನ್ನು ಯೂ ಟೂಬ್ ಮೂಲಕ ತೇಲಿ ಬಿಟ್ಟಿದೆ. ಯೂ ಟೂಬ್‌ನಲ್ಲಿ ಈ ಅಪರೂಪದ ದೃಶ್ಯವನ್ನು ಕೇವಲ ೨೪ ಗಂಟೆಗಳಲ್ಲಿ ೪೦,೦೦೦ ಮಂದಿ ವೀಕ್ಷಿಸಿದ್ದಾರೆ.

ಯೂ ಪೋರ್ಮಿಯಾ ಸೆರೆ ಹಿಡಿದಿರುವ ಆ ದೃಶ್ಯದಲ್ಲಿ ರಕ್ತವರ್ಣ ಚಂದಿರ ಪಕ್ಕದಲ್ಲಿಯೇ ಬಿಳಿ ವರ್ಣದ ವಿಚಿತ್ರ ವಸ್ತುವೊಂದು ಶರವೇಗದಲ್ಲಿ ಸಾಗಿ ಹೋಗಿರುವ ದೃಶ್ಯಗಳಿವೆ.

ಇದು ಅನ್ಯಗ್ರಹ ಜೀವಿಯೇ?

ಹೀಗೆ ಸಾಗಿ ಹೋಗಿರುವುದು ಅನ್ಯಗ್ರಹ ಜೀವಿಯೆ ಇರಬೇಕು. ಕಾರಣ ಮಾನವ ನಿರ್ಮಿತ ಯಾವುದೇ ವಿಮಾನ, ಯಂತ್ರ ಇಷ್ಟೊಂದು ವೇಗದಲ್ಲಿ ಚಲಿಸಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೃಶ್ಯಗಳು ಅನ್ಯಗ್ರಹ ಜೀವಿಗಳ ಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಶೋಧನಾ ಸಂಸ್ಥೆಗಳ ಗಮನ ಸೆಳೆದಿದೆ. ಹಾಗೆಯೇ, ಅನ್ಯಗ್ರಹ ಜೀವಿಗಳ ಶೋಧನಾ ಕಾರ್ಯದಲ್ಲಿ ಒಂದಲ್ಲ ಒಂದು ದಿನ ಯಶಸ್ಸು ಸಿಗುವ ಆಶಾಭಾವನೆಯನ್ನೂ ಮೂಡಿಸಿದೆ.

ಅನ್ಯಗ್ರಹ ಜೀವಿಗಳ ಅಸ್ತಿತ್ವ ಕುರಿತ ಅನೇಕ ವರದಿಗಳು ಬಂದಿವೆ. ವಿಜ್ಞಾನಿಗಳೂ ಕೂಡ ಅನ್ಯಗ್ರಹ ಜೀವಿಗಳು ಇರುವುದನ್ನು ಮತ್ತು ಅವು ನಮ್ಮಗಿಂತ ಬುದ್ಧಿವಂತ ಪ್ರಾಣಿಗಳೆಂದು ಹೇಳುತ್ತಾ ಬಂದಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ  ಅನ್ಯಗ್ರಹದಿಂದ ಬಂದ ರೇಡಿಯೋ ಸಿಗ್ನಲ್‌ಗಳೂ ಅನ್ಯಗ್ರಹ ಜೀವಿಗಳಿಂದ ಬಂದಿರಬೇಕು ಎಂದು ಭಾವಿಸಿರುವ ವಿಜ್ಞಾನಿಗಳು, ಅವಕ್ಕೆ ಅರ್ಥವಾಗಬಹುದಾದ ಸಂಕೇತಗಳನ್ನು ಬಳಸಿ ಮರು ಸಂದೇಶ ಕಳುಹಿಸಿದ್ದಾರೆ. ಹಾಗೂ ಒಂದಲ್ಲಾ ಒಂದು ದಿನ ಆ ಗ್ರಹ ಜೀವಿಗಳಿಂದ ಪ್ರತ್ಯುತ್ತರ ಬರುವ ನಿರೀಕ್ಷೆಯಲ್ಲೂ ಇದ್ದಾರೆ.

ಈ ಮಧ್ಯೆ ಮೊನ್ನೆ ಸಂಭವಿಸಿದ ಪೂರ್ಣಚಂದ್ರ ಗ್ರಹಣ ಸಂದರ್ಭದಲ್ಲಿ ಅಪರೂಪದ ವಸ್ತುವೊಂದು ಚಲಿಸಿದ ದೃಶ್ಯ ಕಂಡು ಬಂದಿದ್ದು, ಇದು ಅನ್ಯಗ್ರಹ ಜೀವಿಯೇ  ಇರಬಹುದೇ ಎಂಬ ಅನುಮಾನ ವಿಜ್ಞಾನಿಗಳನ್ನು ಮತ್ತಷ್ಟು ಕಾಡ ತೊಡಗಿದೆ.

ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ನಾಸಾ ಕೂಡ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಒಪ್ಪಿಕೊಂಡಿದೆ.
ಆದರೆ, ಅದರ ವೈಜ್ಞಾನಿಕ ಖಚಿತತೆ ಬಗ್ಗೆ ಇನ್ನೂ ಬಾಯಿ ಬಿಟ್ಟಿಲ್ಲ.

  • ಉತ್ತನೂರು ವೆಂಕಟೇಶ್

Leave a Comment