ಹುಣಸೂರು ನಗರಸಭೆ ಚುನಾವಣೆ: ಶಾಂತಿಯುತ ಮತದಾನ

ಮೈಸೂರು. ಫೆ. 9: ಮೈಸೂರಿನ ಹುಣಸೂರು ಗ್ರಾಮಾಂತರ ನಗರಸಭೆ ಚುನಾವಣೆ ಇಂದು ನಡೆಯಲಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಯಾವುದೇ ಆಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ನಡೆದಿದೆ.
ತೇಗದ ನಾಡು ಹುಣಸೂರಿಗೆ ಮೊದಲ ನಗರಸಭೆ ಚುನಾವಣೆ ನಡೆಯುತ್ತಿದ್ದು 31 ವಾರ್ಡ್ಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಭಾರೀ ಕಸರತ್ತು ನಡೆಸಿವೆ. ಮಾಜಿ ಶಾಸಕ ಎಚ್. ವಿಶ್ವನಾಥ್ ಅವರ ಪ್ರತಿಷ್ಠೆಯ ಕಣವಾಗಿರುವ ಹುಣಸೂರಿನಲ್ಲಿ 49 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಈ ಕ್ಷೇತ್ರ ಹಾಲಿ ಶಾಸಕ ಎಚ್. ಪಿ. ಮಂಜುನಾಥ್ ಅವರ ಪ್ರತಿಷ್ಠೆಯ ಕಣವೂ ಹೌದು. ಜೆಡಿಎಸ್ನಲ್ಲಿದ್ದ ಎಚ್. ವಿಶ್ವನಾಥ್ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಎಚ್.ಪಿ. ಮಂಜುನಾಥ್ ವಿರುದ್ಧ ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ತಮ್ಮ ಸ್ವಕ್ಷೇತ್ರದಲ್ಲಿ ವರ್ಚಸ್ಸು ಉಳಿಸಿಕೊಳ್ಳುವ ಸವಾಲು ಎಚ್. ವಿಶ್ವನಾಥ್ ಮುಂದಿದೆ.
ದೇವರಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ನಗರಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದಾರೆ. ಮೂವರೂ ನಾಯಕರಿಗೆ ಪ್ರತಿಷ್ಠೆಯ ಕಣವಾಗಿರುವ ಹುಣಸೂರು ನಗರಸಭೆ ಚುನಾವಣೆಯಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಮೊದಲು 27 ವಾರ್ಡ್ ಹೊಂದಿದ್ದ ಹುಣಸೂರಿನಲ್ಲಿ ಪುರಸಭೆ ಇತ್ತು. 4 ವಾರ್ಡ್ ಹೆಚ್ಚಿಸುವುದರ ಜೊತೆ ಈ ಕ್ಷೇತ್ರವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು.
ಸಾಮಾನ್ಯ ಕ್ಷೇತ್ರಕ್ಕೆ ೧೬, ಪರಿಶಿಷ್ಟ ಜಾತಿ ೫, ಪರಿಷ್ಟ ಪಂಗಡ ೩, ಹಿಂದುಳಿದ ವರ್ಗಕ್ಕೆ ೭ ಸ್ಥಾನ ಮೀಸಲು. ಮೊದಲ ನಗರಸಭೆ ಚುಕ್ಕಾಣಿಗಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ನಡುವೆ ಪೈಪೋಟಿ. ಒಟ್ಟು 41,916 ಮತದಾರರು, 20,674 ಪುರುಷರು, 21,240 ಮಹಿಳೆಯರು, 2 ಇತರ ಮತದಾರರು ಇದ್ದಾರೆ.
270 ಚುನಾವಣಾ ಸಿಬ್ಬಂದಿ ನೇಮಕ ಮಾಡಿದ್ದು, ನಗರ ಸೇರಿದಂತೆ 3 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತದಾನಕ್ಕೆ ಇವಿಎಂ ಯಂತ್ರ ಬಳಕೆ ಮಾಡಲಾಗಿದೆ.

Leave a Comment