ಹುಣಸೂರಿನಿಂದ ಕೈ ಅಭ್ಯರ್ಥಿ ನಾಮಪತ್ರ

ಮೈಸೂರು,ನ,೧೩-ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಪ ಮಂಜುನಾಥ್ ಅವರು ಇಂದು ನಾಮಪತ್ರ ಸಲ್ಲಿಸಿದರು.
ಹುಣಸೂರು ಎಸಿ ಕಛೇರಿಗೆ ತಾಯಿ ರತ್ನಮ್ಮ ಹಾಗೂ ನಾಲ್ವರು ಮುಖಂಡರ ಜೊತೆ ಆಗಮಿಸಿದ ಕಾಂಗ್ರೆಸ್ ಅಬ್ಯರ್ಥಿ ಹೆಚ್.ಪಿ ಮಂಜುನಾಥ್, ಚುನಾವಣಾಧಿಕಾರಿ ಪೂವಿತಾ ಅವರಿಗೆ ಎರಡು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದರು. ಬಿ ಪಾರಂ ಜೊತೆಗೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ.
ಮೆರವಣಿಗೆ ನಡೆಸದೆ ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಇನ್ನು ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಬಿಜೆಪಿಯಿಂದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪರ್ಧಿಸುತ್ತಾರೋ ಅಥವಾ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆಯೂ ಕಾದು ನೋಡಬೇಕು.

Leave a Comment