ಹುಣಸೂರಿನಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ

ಹುಣಸೂರು. ಸೆ.10. ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಭಾರತಬಂದ್‍ಗೆ ನೀಡಲಾಗಿದ್ದ ಕರೆಗೆ ಹುಣಸೂರಿನಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಇಂದು ಬೆಳಗ್ಗೆ 10 ಗಂಟೆಯವರೆಗೆ ಹುಣಸೂರಿನಲ್ಲಿ ಬಸ್ಸುಗಳ ಸಂಚಾರ, ಆಟೋಗಳ ಸಂಚಾರ ಸೇರಿದಂತೆ ಅಂಗಡಿ – ಮುಗ್ಗಂಟುಗಳು ತಮ್ಮ ಎಂದಿನ ವ್ಯವಹಾರದಲ್ಲಿ ತೊಡಗಿದ್ದವು. 10 ಗಂಟೆಯ ನಂತರ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷಗಳ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ತೆರದಿದ್ದ ಅಂಗಡಿ ಮುಗ್ಗಂಉಗಳನ್ನು ಮುಚ್ಚಿಸಿದರು. ಇದರಿಂದಾಗಿ ಹುಣಸೂರು ಪಟ್ಟಣದಲ್ಲಿ ನೀರವ ಮೌನ ಕಂಡುಬಂದಿತು. ಹುಣಸೂರು ಪಟ್ಟಣದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರುವುದಿಲ್ಲ.

Leave a Comment