ಹುಡುಗಿ, ಖರ್ಚು ಮಾಫಿಯಾ

ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಸಮಾಜಿಕ ಜವಾಬ್ದಾರಿಯನ್ನು ಒತ್ತಿ ಹೇಳುವ ಸಿನೆಮಾ ಇದು ಈಗಾಗಲೇ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಬಿಡುಗಡೆಗೆ ಸಿದ್ದತೆ ನಡೆಸಿರುವ ಈ ಚಿತ್ರದಲ್ಲಿ ತೊಡಗಿಸಿಕೊಂಡಿರುವುದು ಬಹುತೇಕ ಹೊಸಬರೇ ಆಗಿದ್ದಾರೆ.

ಕಳೆದ ಒಂಭತ್ತು ತಿಂಗಳಿನಿಂದ ಚಿತ್ರವನ್ನು ಪೂರ್ಣಗೊಳಿಸಲು ಶ್ರಮಿಸಲಾಗಿದೆ ಚಿತ್ರದಲ್ಲಿ ಸಾಮಾಜಿಕ ಜವಾಬ್ದಾರಿ ಇರುವವರು ಇಲ್ಲದೇ ಇರುವವರು ಹೇಗೆ ವರ್ತಿಸುತ್ತಾರೆ ಪರಿಸ್ಥಿತಿಗೆ ತಕ್ಕಂತೆ ಹೇಗೆ ಬದಲಾಗುತ್ತಾರೆ ಎನ್ನುವುದನ್ನ ಹೇಳಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಅಮರ್ ಚಲ. ಕತೆಯು ಎರಡು ಟ್ರಾಕ್‌ಗಳಲ್ಲಿ ಸಾಗುತ್ತದೆ. ಮೇಲ್ದರ್ಜೆ ಹಾಗೂ ಮಧ್ಯಮ ವರ್ಗದ ಪ್ರೇಮಿಗಳ ಸುತ್ತ ನಡೆಯಲಿದ್ದು, ಆಕೆಯನ್ನು  ಖುಷಿಪಡಿಸಲು ಹಣಕ್ಕಾಗಿ ಮಾಫಿಯಾ ಜಾಲಕ್ಕೆ ಹೋದಾಗ ಏನಾಗುತ್ತದೆ, ಮತ್ತೊಂದು ಕಡೆ ಸೈಬರ್‌ಕ್ರೈಮ್ ವ್ಯವಹಾರದಲ್ಲಿ ತೊಡಗಿಕೊಂಡಾಗ ಪ್ರೀತಿ ಉಳಿಯುತ್ತದಾ ಎಂಬುದನ್ನು ತೋರಿಸಲಾಗಿದೆ ಎಂದು ವಿವರ ನೀಡುತ್ತಾರೆ.

’ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭವನ್ನು ಕಳೆದ ಸೋಮವಾರ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೂ ಮುನ್ನ ಮಾದ್ಯಮದವರಿಗೆ ಚಿತ್ರದ ವಿವರ ನೀಡಿದ ಅವರು ಚಿತ್ರದಲ್ಲಿ ಇಬ್ಬರು ನಾಯಕರಲ್ಲಿ ಒಬ್ನ ಪಾತ್ರಕ್ಕೆ ನಾನು ಸೂಕ್ತ ಎನಿಸಿತು ಅದಕ್ಕಾಗಿ ನಾನೇ ಆ ಪಾತ್ರವನ್ನು ನಿಭಾಯಿಸಿದ್ದೇನೆ ಎನ್ನುತ್ತಾರೆ.

ಸಹಾಯಕ ನಿರ್ದೇಶಕರಾಗಿದ್ದ ಚಲ ನನ್ನ ನಟನೆಯನ್ನು ನೋಡಿಕೊಂಡಿದ್ದರಿಂದ ಅವರನ್ನು ನನ್ನ ಹೆಸರಿನ ಜೊತೆ ಸೇರಿಸಿ ಅವರನ್ನು ನಿರ್ದೇಶಕನನ್ನಾಗಿ ಮಾಡಿಕೊಂಡಿದ್ದೇನೆ ಎನ್ನುವ ಅಮರ್ ಹಿಂದೆ ದಿಲ್‌ದಾರ್ ಎನ್ನುವ ಸಿನೆಮಾ ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ.

ನವಪ್ರತಿಭೆ ಶ್ಯಾಂಸುಂದರ್ ನಾಯಕನಾಗಿ ಹೊಸ ಅನುಭವ. ಇಂಜಿನಿಯರ್ ಆಗಿರುವ ಅವರು ನಟನೆಯ ಸೆಳೆತದಿಂದ ಸಹಾಯಕ ನಿರ್ದೇಶಕರಾಗಲು ಬಂದಿದ್ದರು ಆದರೆ ನಾಯಕನ ಪಾತ್ರಕ್ಕೆ ಸೂಕ್ತ ಎನಿಸಿ ನಿರ್ದೇಶಕರು ಪಾತ್ರ ಕೊಟ್ಟಿದ್ದಾರೆ ಒಳ್ಳೆಯ ನಟನೆ ಮಾಡಿದ ಖುಷಿ ಇದೆ ಎಂದರು ಶ್ಯಾಂಸುಂದರ್ ಇವರಿಗೆ ಶ್ರದ್ದಾ ಬೆಣಗಿ ನಾಯಕಿ.

ಐದನೇ ಸೆಮಿಸ್ಟಾರ್ ಎಂಜಿನಿಯರಿಂಗ್ ಪದವಿ ಓದುತ್ತಿರುವ ಅವರಿಗೆ ಮೊದಲ ನಟನೆಯ ಅನುಭವ ಅಶ್ವಿನಿ ಮತ್ತೊಬ್ಬ ನಾಯಕಿಯರು. ಎ.ಆರ್.ರೆಹಮಾನ್ ಬಳಿ ಕೆಲಸ ಮಾಡಿರುವ ವಿಕ್ರಂವರ್ಮನ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ ಭಾಷೆಯ ಪ್ರೀತಿಯ ಮೇಲೆ ಮಧ್ಯಪ್ರದೇಶದ ವಿಶಾಲ್‌ತಿವಾರಿ ಅಕ್ಷರ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದಾರೆ.

ನಂತರ ನಡೆದ ಕಾರ್ಯಕ್ರಮದಲ್ಲಿ ಸಿಡಿ ಅನಾವರಣಗೊಳಿಸಿದ ವಾಣಿಜ್ಯ ಮಂಡಳಿ ಪದಾದಿಕಾರಿಯಾದ ಉಮೇಶ್‌ಬಣಕಾರ್ ಎಲ್ಲಾ ಓಕೆ. ಮಾಫಿಯಾ ಯಾಕೆ ಎಂಬುದು ಪ್ರಶ್ನೆಯಾಗಿದೆ. ಸಿನಿಮಾ ನೋಡಿದರೆ ತಿಳಿಯಬಹುದು. ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಶೀರ್ಷಿಕೆಗಳು ಜನರ ಮನಸೆಳೆದು ಯಶಸ್ಸು ಕಾಣುತ್ತಿವೆ. ಅದೇ ಸಾಲಿಗೆ ಇದು ಸೇರಲಿ ಎಂದರು.

ಟೀಸರ್ ಬಿಡುಗಡೆ ಮಾಡಿದ ನಿರ್ದೇಶಕ ಗಿರಿರಾಜ್ ಸಿನಿಮಾವು ವೈರಲ್ ಆಗಿ ವೈರಲ್ ಫೀವರ್ ಬರಲಿ ಎನ್ನುತ್ತಾರೆ. ಸಚಿವ ಯು.ಟಿ.ಖಾದರ್ ಒಂದು ಹಾಡನ್ನು ಬಿಡುಗಡೆ ಮಾಡಿದರು.ಶಾಸಕ ಅಶ್ವಥನಾರಾಯಣ ಸೇರಿ ಗಣ್ಯರುಗಳು ತಂಡಕ್ಕೆ ಶುಭಹಾರೈಸಿದರೆ, ಕಲಾವಿದರು ಅನುಭವಗಳನ್ನು ಹಂಚಿಕೊಂಡರು.

Leave a Comment