ಹುಡಾ ಅಧ್ಯಕ್ಷರಾಗಿ ಜೀರೆ ಅಧಿಕಾರ ಸ್ವೀಕಾರ

ಬಳ್ಳಾರಿ ಮೇ31: ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಶೋಕ‌‌ ಜೀರೆ ಅವರು ಇಂದು ಹೊಸಪೇಟೆ ನಗರದ ಹುಡಾ ಕಚೇರಿಯ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್ .ಆನಂದಸಿಂಗ್ ಪದಗ್ರಹಣ ಕಾರ್ಯಕ್ರಮಕ್ಕೆ ‌ಚಾಲನೆ ನೀಡಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್ ಹೊಸಪೇಟೆ ನಗರವನ್ನು ಸ್ವಚ್ಚ ಸುಂದರ ನಗರವನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಗರಾಭಿವೃದ್ದಿ ಪ್ರಾಧಿಕಾರದಿಂದ ನಗರದ ಸೌಂದರೀಕರಣಕ್ಕೆ ಹೆಚ್ಚು ಒತ್ತು‌ನೀಡಬೇಕು ಎಂದರು.
ಹಲವು ‌ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಮುಖಂಡರಾಗಿದ್ದ ಜೀರೆ ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ‌ನೀಡಿದೆ. ಯಾರೇ ಆಗಲಿ ಪಕ್ಷದಲ್ಲಿ ದುಡಿದರೆ ಸೂಕ್ತ ಕಾಲದಲ್ಲಿ ಅದು ಗುರುತಿಸಲಿದೆಂದರು.

ಪಕ್ಷ ಮತ್ತು ಸರಕಾರ ನನಗೆ ನೀಡಿರುವ ಜವಾಬ್ದಾರಿಯನ್ನು ಸಚಿವರು, ಆಧಿಕಾರಿಗಳು, ಮುಖಂಡರು. ಮತ್ತು ಕಾರ್ಯಕರ್ತರ ಸಹಕಾರದಿಂದ ನಿಭಾಯಿಸಿ ಹಂಪಿ ‌ಪ್ರವಾಸಿಗರ ಬಾಗಿಲಿನಂತಿರುವ ಹೊಸಪೇಟೆ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ‌ಪ್ರಯತ್ನ ‌ಮಾಡುವುದಾಗಿ ಅಶೋಕ್ ಜೀರೆ ಹೇಳಿದರು
ತಾಪಂ‌ ಅಧ್ಯಕ್ಷೆ ನಾಗವೇಣಿ ಮತ್ತಿತರರು ಇದ್ದರು.

Share

Leave a Comment