ಹುಟ್ಟು ಹಬ್ಬದ ಸಂಭ್ರಮದಲ್ಲಿ ಬೇಬಿ ಡಾಲ್

ಮುಂಬೈ, ಮೇ13- ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೈಲಾ ಗೆ ಅಭಿಮಾನಿಗಳಿಂದ ಶುಭಾಶಯಗಳ‌ ಮಹಾಪೂರವೇ ಹರಿದು ಬರುತ್ತಿದೆ.ಇನ್ನು, ಪತಿ ಡೇನಿಯಲ್ ವೆಬರ್, ಸನ್ನಿಗೆ ವಿಶೇಷವಾಗಿ ಶುಭಕೋರಿದ್ದಾರೆ.

ಸನ್ನಿ ನೀನು ಶ್ರೇಷ್ಠ ತಾಯಿ, ಪತ್ನಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಫೂರ್ತಿ, ರೋಲ್ ಮಾಡೆಲ್. ನಿನ್ನ ಬಗ್ಗೆ ಸಾಕಷ್ಟು ಮಂದಿ ಕೆಟ್ಟದಾಗಿ ಮಾತನಾಡಿದರೂ ನೀನು ಹೆದರಲಿಲ್ಲ. ಯಾರೇ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ. ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ಬರೆದು ಇನ್‍ಸ್ಟಾಗ್ರಾಮ್‍ನಲ್ಲಿ ಡೇನಿಯಲ್ ಪೋಸ್ಟ್ ಶೇರ್ ಮಾಡಿ ವಿಶ್ ಮಾಡಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ಮನಸೋತ ಬೇಬಿ ಡಾಲ್ ವಿಡಿಯೋ ಒಂದನ್ನು ಮಾಡಿ, ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ ಎಂದು ಹುಟ್ಟುಹಬ್ಬಕ್ಕೆ ಶುಭಕೋರಿದ ಅಭಿಮಾನಿಗಳಿಗೆ ಮನಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಸನ್ನಿ ಲಿಯೋನ್ ಮತ್ತು ಡೇನಿಯಲ್ ದಂಪತಿಗೆ ನಿಶಾ, ಆಶರ್, ನೋಹಾ ಮೂರು ಮಕ್ಕಳಿದ್ದಾರೆ.ನೀಲಿ ಚಿತ್ರತಾರೆಯಾಗಿ ಮಿಂಚಿದ್ದ ಸನ್ನಿ ಲಿಯೋನ್ 2012ರಲ್ಲಿ ಜಿಸ್ಮ್-2 ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದು, ಜಾಕ್‌ಪಾಟ್, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಲೈಲಾ ಮೈ ಲೈಲಾ, ಬೇಬಿ ಡಾಲ್ ಹಾಗೂ ಕನ್ನಡದ ಸೇಸಮ್ಮಾ ಹಾಡು ಸೇರಿ ಅನೇಕ ಐಟಂ ಸಾಂಗ್ ಗಳಿಗೆ ಸನ್ನಿ ಹೆಜ್ಜೆಹಾಕಿದ್ದಾರೆ.

Leave a Comment