ಹುಟ್ಟುಹಬ್ಬಕ್ಕೆ ಹಾರ, ತುರಾಯಿ ಬೇಡ, ದವಸ ಧಾನ್ಯ ತನ್ನಿ ಅಭಿಮಾನಿಗಳಿಗೆ ದರ್ಶನ್ ಮನವಿ

 

ಬೆಂಗಳೂರು, ಜ ೧೭- ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಹುಟ್ಟುಹಬ್ಬಕ್ಕೆ ದಿನಗಣನೆ ಇರುವಾಗಲೇ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಮನೆಮಾಡಿದ್ದು. ಆದರೆ ನಟ ದರ್ಶನ್ ಅವರು ಈ ಬಾರಿಯೂ ಸರಳ ಆಚರಣೆಗೆ ಕರೆನೀಡಿದ್ದಾರೆ.

ಅಷ್ಟೆ ಅಲ್ಲ ಈ ಬಾರಿ ಅಭಿಮಾನಿಗಳು ಕೇಕ್, ಹಾರ, ತುರಾಯಿಗಳನ್ನು ತರದೇ ದವಸ ಧಾನ್ಯಗಳನ್ನು ತರುವಂತೆ ಮನವಿ ಮಾಡಿದ್ದಾರೆ. ತಮ್ಮ ನೆಚ್ಚಿನ ಡಿಬಾಸ್ ಜನ್ಮದಿನವನ್ನು ಅಭಿಮಾನಿಗಳು ತಮ್ಮಷ್ಟದಂತೆ ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಿತ್ತಿದ್ದಾರೆ. ಆದರೆ, ಚಾಲೇಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ.

ಫೆಬ್ರವರಿ೧೬ರಂದು ದರ್ಶನ್ ಹುಟ್ಟು ಹಬ್ಬ ಇರುವುದರಿಂದ ಹಾರ, ತುರಾಯಿ, ಕೇಕ್ ತರುವ ಬದಲು ಅಕ್ಕಿ ,ಬೇಳೆ, ದವಸ ಧಾನ್ಯ ತರಲು ಡಿ ಬಾಸ್ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಜನ್ಮದಿನದ ನಂತರ ಸಂಗ್ರಹಣೆಯಾದ ಅಕ್ಕಿ, ಧವಸ ಧಾನ್ಯಗಳನ್ನು ಡಿ ಬಾಸ್ ಅನಾಥಾಶ್ರಮಗಳಿಗೆ ತಲುಪಿಸುವ ಯೋಜನೆ ರೂಪಿಸಿದ್ದು, ಈಗಾಗಲೇ ಮೈಸೂರಿನಲ್ಲಿ ದವಸ ಧಾನ್ಯ ಸಂಗ್ರಹಿಸುವ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಮುಂದಾಗಿದ್ದಾರೆ.

ದರ್ಶನ್ ಕೂಡ ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಕೇಕ್, ಹಾರಕ್ಕೆ ಖರ್ಚು ಮಾಡುವ ಹಣದಲ್ಲಿ ದವಸ-ಧಾನ್ಯ ತೆಗೆದುಕೊಂಡು ಬರುವಂತೆ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

Leave a Comment