ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ?

ಮಗುವೊಂದು ತಾಯಿ ಗರ್ಭದಿಂದ ಹೊರಬಂದ ತಕ್ಷಣ ಮಾಡುವ ಕೆಲಸವೆಂದರೆ, ಗಂಟಲು ಕಿತ್ತುಹೋಗುವಂತೆ ಅಳುವುದು. ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ?

ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ. ಆದರೆ ಹೊರ ಪ್ರಪಂಚಕ್ಕೆ ಬಂದ ತಕ್ಷಣ ಆ ಶಬ್ಧ ದೂರವಾಗಿ ಮಗುವಿಗೆ ತಾನೇನು ಅನುರಕ್ಷಿತ ಜಾಗಕ್ಕೆ ಬಂದನೇನೋ ಎಂಬ ಭಯ ಕಾಡಲಾರಂಭಿಸಿ, ಮಗು ಜೋರಾಗಿ ಅಳುತ್ತದೆ. ಆದರೆ ಅಳುತ್ತಿರುವ ಮಗುವನ್ನು ತಾಯಿ ತನ್ನ ಹತ್ತಿರಕ್ಕೆ ಕರೆದುಕೊಂಡ ತಕ್ಷಣ ಮಗು ಅಳು ನಿಲ್ಲಿಸುತ್ತದೆ. ಕಾರಣ ಮಗುವಿಗೆ ಅಮ್ಮನ ಎದೆ ಹತ್ತಿರ ಬಂದಾಗ ಅದಕ್ಕೆ ಲಯಬದ್ಧ ಸದ್ದು ಕೇಳಿಸುತ್ತದೆ.

ಇದರಿಂದ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಮಗುವಿಗೆ ತನ್ನ ಅಮ್ಮನ ಮೇಲೆ ಅಷ್ಟು ನಂಬಿಕೆ. ಹಾಗಾಗಿಯೇ ತಾಯಿ – ಮಗುವಿನ ಸಂಬಂಧ ಅವಿನಾಭಾವ. ಇದನ್ನೇ `ತಾಯಿಗಿಂತ ದೇವರಿಲ್ಲ’ ಎಂದು ವ್ಯಾಖ್ಯಾನಿಸಬಹುದು.

ನಿದ್ರಾಹೀನತೆಗೆ ಬೆಳ್ಳುಳ್ಳಿ ಸಂಜೀವಿನಿ

ಬೆಳ್ಳುಳ್ಳಿ ಉಪಯೋಗ ಹಲವು ಹೃದಯ ಕಾಯಿಲೆಯಿಂದ ಎಲ್ಲದ್ದಕ್ಕೂ ಬೆಳ್ಳುಳ್ಳಿ ರಾಮಬಾಣ. ಬೆಳ್ಳುಳ್ಳಿ ಆರೋಗ್ಯ ಸಂಜೀವಿನಿ. ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆ ಉತ್ತಮ. ಆರೋಗ್ಯಕ್ಕೆ ಮದ್ದು, ಇಂತಹ ಬೆಳ್ಳುಳ್ಳಿ ಈಗ ನಿದ್ರಾಹೀನತೆಗೂ ಪರಿಹಾರ ದೊರಕಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ನಿದ್ರೆ ಇಲ್ಲದೆ ರಾತ್ರಿಗಳನ್ನು ಕಳೆಯುತ್ತೀರಾ! ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡರು. ನಿದ್ದೆ ಬರುತ್ತಿಲ್ಲವೇ? ಇದಕ್ಕೆಲ್ಲ ಪರಿಹಾರ ಎಂದರೆ ಬೆಳ್ಳುಳ್ಳಿ. ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಇಟ್ಟು ಮಲಗಿದರೆ ಸುಖನಿದ್ರೆ ಬರುತ್ತದೆ.

ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಸುಖನಿದ್ರೆ ತರಿಸುತ್ತವೆ ಎನ್ನುತ್ತದೆ ಸಂಶೋಧನಾ ವರದಿಗಳು. ಇನ್ನೇಕೆ ತಡ ನಿದ್ರೆ ಬರುತ್ತಿಲ್ಲವೇ, ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗಿಟ್ಟು ಮಲಗಿ ಒಳ್ಳೆಯ ನಿದ್ರೆ ನಿಮ್ಮದಾಗುತ್ತದೆ.

Leave a Comment