ಹುಕ್ಕಾ ಬಾರ್  3 ಮಂದಿ ಬಂಧನ

ಬೆಂಗಳೂರು, ಜೂ. ೨೦- ಅಶೋಕ್ ನಗರದ ಲಾಂಗ್ ಫೋರ್ಡ್ ಟೌನ್‌ನಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಶೋಕ್ ನಗರದ ನಿತಿನ್ (51), ಮುಫದಲ್ ಹುಸೇನ್ (29), ವಿವೇಕ್ (27) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 15 ಸಾವಿರ ರೂ. ನಗದು, ಮದ್ಯದ ಬಾಟಲಿಗಳು, ಸ್ವೈಯ್‌ಪಿಂಗ್ ಯಂತ್ರಗಳು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.
ಲಾಂಗ್ ಫೋರ್ಡ್ ಟೌನ್‌ನ ವಾಣಿಜ್ಯ ಕಟ್ಟಡವೊಂದರ 5ನೇ ಮಹಡಿಯಲ್ಲಿ ಥ್ರೋ ಬ್ಯಾಕ್ ಪಬ್ ಅಂಡ್ ಡೈನ್ ಎಂಬ ಅಕ್ರಮವಾಗಿ ಹುಕ್ಕಾ ಬಾರ್ ತೆಗೆದು ಅವಧಿ ಮೀರಿ ಮದ್ಯಪಾನ ಮಾಡಲು ಅವಕಾಶ ನೀಡುವುದು, ಇನ್ನಿತರ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Comment