ಹುಕ್ಕಾ ಬಾರ್‌ಗೆ ದಾಳಿ: ಇಬ್ಬರ ವಿರುದ್ಧ ಕೇಸ್

ಉಳ್ಳಾಲ, ಫೆ.೧೧- ಮುನ್ನೂರು ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಮೇಲೆ ಉಳ್ಳಾಲ ಠಾಣಾ ಪೊಲೀಸರು, ದಾಳಿ ನಡೆಸಿದ್ದು, ಬಾರ್ ಮಾಲೀಕ ಜೋಜೋ ಜೋಸ್ಸೇಫ್ ಮತ್ತು ಮ್ಯಾನೇಜರ್ ಸಲೀಂ ವಿರುದ್ದ ದೂರು ದಾಖಲಿಸಿದ್ದಾರೆ. ದಾಳಿ ಸಂದರ್ಭ ಸುಮಾರು ೫೭ ಪ್ಯಾಕ್ ಸ್ಮೋಕಿಂಗ್ ಹುಕ್ಕಾ ಫೇವರ್‌ಗಳು, ೮ ಹುಕ್ಕಾ ಪಾಟ್‌ಗಳು ೧೫ ಹುಕ್ಕಾ ಪೈಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆಆರ್ ಸೂಚನೆಯಂತೆ ಪೊಲೀಸ್ ಉಪನಿರೀಕ್ಷಕ ರಾದ ಗುರಪ್ಪಕಾಂತಿ, ಕಾನ್‌ಸ್ಟೆಬಲ್ ರಂಜಿತ್, ಪ್ರಶಾಂತ್, ದಿಲ್ಲೆಪ್ಪ, ಅಕ್ಬರ್ ದಾಳಿ ನಡೆಸಿದ್ದಾರೆ.

Leave a Comment