ಹೀನಾ ಸಿಧುಗೆ ಒಲಿದ ಕಂಚು

ಜಕಾರ್ತ , ಆ ೨೪- ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನಡುವೆ ಭಾರತದ ಅನುಭವಿ ಶೂಟರ್ ಹೀನಾ ಸಿಧು ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತದ ಶೂಟರ್‌ಗಳ ಪದಕಗಳ ಬೇಟೆ ಮುಂದುವರೆದಿದೆ.

ತೀವ್ರ ಪೈಪೂಟಿಯಿಂದ ಕೂಡಿದ್ದ ಶೂಟಿಂಗ್‌ನಲ್ಲಿ ಕೇವಲ ಕೂದಲೆಳೆ ಅಂತರದಲ್ಲಿ ಸಿಧು ಬೆಳ್ಳಿ ಪದಕದಿಂದ ವಂಚಿತರಾದರು. ಇನ್ನು ಇದೇ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಮನು ಬಾಕರ್ ಪದಕ ಗೆಲ್ಲಲು ಮತ್ತೊಮ್ಮೆ ವಿಫಲರಾಗಿದ್ದಾರೆ.

ಕೊನೆಯ ಶೂಟ್‌ನಲ್ಲಿ ೯.೬ ಅಂಕ ಕಲೆಹಾಕಿದ ಸಿದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಪದಕದೊಂದಿಗೆ ಸಿದು ಒಟ್ಟಾರೆ ಏಷ್ಯನ್ ಗೇಮ್ಸ್‌ನಲ್ಲಿ ಮೂರನೇ ಪದಕ ಗೆದ್ದಂತಾಗಿದೆ. ಇನ್ನು ೧೬ ವರ್ಷದ ಮನು ಬಾಕರ್ ೧೭೬.೨ ಸ್ಕೋರ್ ಗಳಿಸಿ ೫ನೇ ಸ್ಥಾನ ಪಡೆದುಕೊಂಡರು.

Leave a Comment