ಹಿಸ್ಟೆರೊಸ್ಕೋಪಿಕ್ ಕ್ಯಾನುಲೇಶನ್

‘ಫೆಲೋಪಿಯನ್ ಟ್ಯೂಬ್ಸ್’ ಅಂದರೆ ಗರ್ಭನಾಳಗಳು ಅಂಡಾಣು ಹಾಗೂ ವೀರ್ಯಾಣು ಮಿಲನಗೊಳ್ಳುವ ಒಂದು ನಿರ್ದಿಷ್ಟ ಸ್ಥಳ. ಗರ್ಭಧಾರಣೆಯಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಈ ಗರ್ಭನಾಳಗಳಲ್ಲಿ ಅಡೆತಡೆಯೇನಾದರೂ ಇದ್ದರೆ, ಸಮಸ್ಯೆ ಇದ್ದರೆ ಅದು ಬಂಜೆತನಕ್ಕೆ ಕಾರಣವಾಗಬಹುದು. ಈ ಅಡೆತಡೆ ಎರಡು ರೀತಿಯಲ್ಲಿ ಆಗಬಹುದು. ಮೊದಲನೆಯದು – ದೈಹಿಕ ತೊಂದರೆ ಅಂದರೆ ಡೆಬ್ರಿಸ್, ಮ್ಯೂಕಸ್, ಎಂಡೊಮೆಟ್ರಿಯಲ್ ಟ್ಯಾಗ್ಸ್ ಮುಂತಾದವು. ಎರಡನೇ ಪ್ರಕಾರದ ತೊಂದರೆ ಕ್ಲೈಮೆಡಿಯ, ಟ್ರಾಕೊಮ್ಯಾಟಿಸ್, ಯೂರಿಯ ಪ್ಲಾಸ್ಮಾ, ಯೂರಿಯಾಲ್ಯಾಟಿಕಮ್, ಮೈಕೊಪ್ಲಾಸ್ಮಾ, ಹೊಮಿನಿಸ್, ಪ್ರೊಟೊಜೋವನ್ ಮುಂತಾದ ಸೋಂಕುಗಳ ಸಮಸ್ಯೆಯಿಂದ ಗರ್ಭನಾಳಗಳು ಸೋಂಕಿಗೆ ತುತ್ತಾಗಿ ಗರ್ಭಧರಿಸದ ಸ್ಥಿತಿ ತಲುಪಬಹುದು.

ಏನಿದು ಪ್ರಾಕ್ಸಿಮಲ್ ಟ್ಯೂಬಲ್ ಆಕ್ಲೂಸನ್ (Pto)

ದಂಪತಿಗಳು ಬಂಜೆತನದ ಸಮಸ್ಯೆ ಹೇಳಿಕೊಂಡು ಬಂದಾಗ ಹೆಂಡತಿಯ ಗರ್ಭಕೋಶದ ಬಗ್ಗೆ ತಜ್ಞರು ಅವಲೋಕನ ನಡೆಸುತ್ತಾರೆ. ಆಗ ವೈದ್ಯರಿಗೆ ಗರ್ಭಕೋಶದ ಸಮೀಪವೇ
’ಪ್ರಾಕ್ಸಿಮಲ್ ಟ್ಯೂಬಲ್ ಆಕ್ಲೂಸನ್’ ಸಮಸ್ಯೆ ಇರುವುದು ಕಂಡುಬರುತ್ತದೆ.

pto ಕಂಡುಹಿಡಿಯುವ ವಿಧಾನಗಳು
ಹಿಸ್ಟರೋಸ್ಯಾಲ್ಫಿಂಗೊಗ್ರಾಫಿ)
ಹಿಸ್ಟರೋಸ್ಯಾಲ್ಫಿಂಗೊ ಕಾಂಟ್ರಾಸ್ಟ್ ಸೊನೊಗ್ರಫಿ
ಎಂಡೊಸ್ಕೋಪಿ (ಲ್ಯಾಪ್ರೋಸ್ಕೋಪಿ ಮತ್ತು ಹಿಸ್ಟರೋಸ್ಕೋಪಿ)
ಹಿಸ್ಟರೋಸ್ಯಾಲ್ಫಿಂಗೊಗ್ರಾಫಿ (ಹೆಚ್.ಎಸ್.ಜಿ): ಗರ್ಭನಾಳಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ನಡೆಸುವ ಪ್ರಥಮ ಪರೀಕ್ಷೆ. ಈ ವಿಧಾನದಲ್ಲಿ ಒಂದು ಬಗೆಯ ದ್ರಾವಣವನ್ನು ಗರ್ಭನಾಳಗಳಲ್ಲಿ ಹರಿಸಿ ಅವುಗಳ ಗುಣಮಟ್ಟ ಪರೀಕ್ಷಿಸಲಾಗುತ್ತದೆ.
ಇದು ಅತ್ಯಂತ ಕಡಿಮೆ ವೆಚ್ಚದ ಪರೀಕ್ಷೆ. ಆದರೆ ಇದರಿಂದ ಪಿ.ಐ.ಡಿ ಹಾಗೂ ಎಂಡೊಮೆಟ್ರಿಯೋಸಿಸ್’ನ್ನು ಕಂಡುಹಿಡಿಯಲಾಗುವುದಿಲ್ಲ.
ಹೆಚ್.ಎಸ್.ಜಿಯ ಪಲಿತಾಂಶಗಳು:-

ಟ್ಯೂಬಲ್ ಪೆಟೆನ್ಸಿ: ಗರ್ಭನಾಳಗಳ ಸ್ಥಿತಿಗತಿಯನ್ನು ತಿಳಿಯಲು ಒಂದು ಬಗೆಯ ದ್ರವವನ್ನು ಒಳಗೆ ಹರಿಸಿ ಎಕ್ಸರೇ ಮೂಲಕ ಕಂಡುಕೊಳ್ಳಲಾಗುತ್ತದೆ.

ಟ್ಯೂಬಲ್ ಪಾರ್ಶಿಯಲ್ ಆಬ್’ಸ್ಟ್ರಕ್ಶನ್ : ದ್ರವ ಪದಾರ್ಥ ಗರ್ಭನಾಳದಲ್ಲಿ ಅಂಕುಡೊಂಕಾಗಿ ಸಾಗಿದರೆ ಗರ್ಭನಾಳಗಳ ಸ್ಥಿತಿ ಸಮರ್ಪಕವಾಗಿಲ್ಲ ಎನ್ನುವುದು ಖಚಿತವಾಗುತ್ತದೆ.

ಫೆಲೋಪಿಯನ್ ಟ್ಯೂಬ್ ಆಬ್’ಸ್ಟ್ರಕ್ಶನ್ : ಗರ್ಭನಾಳಗಳು ಪೂರ್ತಿಯಾಗಿ ಬ್ಲಾಕ್ ಆಗಿದ್ದರೆ ಅಲ್ಲಿ ಏನೂ ಕಂಡುಬರುವುದೇ ಇಲ್ಲ. ಕೇವಲ ಗರ್ಭಕೋಶ ಮಾತ್ರ ಗೋಚರಿಸುತ್ತದೆ.

ಹಿಸ್ಟರೋಸ್ಯಾಲ್ಫಿಂಗೊ ಕಾಂಟ್ರಾಸ್ಟ್ ಸೊನೊಗ್ರಫಿ (hycosy):
ಇದು ಟ್ಯೂಬ್ ಪರೀಕ್ಷೆಯ ಒಂದು ವಿಧಾನ. ಆದರೆ ಇದರಲ್ಲಿ ಗರ್ಭನಾಳಗಳ ಆಂತರಿಕ ಸ್ಥಿತಿಗತಿಯ ಸಂಪೂರ್ಣ ಚಿತ್ರಣ ಗೋಚರಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಟ್ಯೂಬಲ್ ಮ್ಯೂಕಸ್ ಹಾಗೂ ಅಂಟಿಕೊಂಡಿರುವ ಬಗ್ಗೆ ಗೊತ್ತಾಗುವುದಿಲ್ಲ.

ಗೈನಕಾಲಜಿಕಲ್ ಎಂಡೊಸ್ಕೋಪಿ

ಲ್ಯಾಪ್ರೋಸ್ಕೋಪಿ : ಇದೊಂದು ಉತ್ಕೃಷ್ಟ ತಪಾಸಣಾ ವಿಧಾನ. ಗರ್ಭನಾಳಗಳು ಹೇಗಿವೆ, ಅಂಡಾಶಯದ ಸ್ಥಿತಿ ಹೇಗಿದೆ, ಗರ್ಭನಾಳಗಳಲ್ಲಿ ಎಲ್ಲಿಯಾದರೂ ಅಂಟಿಕೊಂಡಿದೆಯೇ ಎಂಬುದು ಈ ಪರೀಕ್ಷೆಯ ಮೂಲಕ ಸ್ಪಷ್ಟವಾಗುತ್ತದೆ.

ಹಿಸ್ಟರೋಸ್ಕೋಪಿ: ಗರ್ಭಕೋಶದ ಮೂಲಕ ಎಂಡೊಸ್ಕೋಪಿಯನ್ನು ತೂರಿಸಿ ಗರ್ಭನಾಳಗಳಲ್ಲಿ ಅಡೆತಡೆ ಉಂಟಾಗಲು ಏನು ಕಾರಣ ಎಂಬುದನ್ನು ಇದರ ಮೂಲಕ ಸ್ಪಷ್ಟವಾಗಿ ಕಂಡುಕೊಳ್ಳಲಾಗುತ್ತದೆ.
ನಿಖರ ಪರಿಣಾಮ ಕಂಡುಕೊಳ್ಳಲು ಹಿಸ್ಟರೋಸ್ಕೋಪಿ ಹಾಗೂ ಲ್ಯಾಪ್ರೋಸ್ಕೋಪಿ ಎರಡನ್ನೂ ಮಾಡಲು ಸಲಹೆ ಮಾಡಲಾಗುತ್ತದೆ.

ನಿರ್ವಹಣೆ : ಒಂದು ಬಗೆಯ ತಂತಿ ಅಥವಾ ವೈರ್’ನ್ನು ಗರ್ಭನಾಳಗಳಲ್ಲಿ ತೂರಿಸಿ ಅಡೆತಡೆಯನ್ನು ನಿವಾರಿಸಲಾಗುತ್ತದೆ. ಇದನ್ನೇ ’ಕ್ಯಾನುಲೇಶನ್ ಪ್ರಕ್ರಿಯೆ’ ಎಂದು ಹೇಳಲಾಗುತ್ತದೆ. ಇದು ಬಂಜೆತನ ನಿವಾರಣೆಯಲ್ಲಿ ಶೇಕಡಾ ೪೦ರಷ್ಟು ಯಶಸ್ಸು ತಂದುಕೊಡಬಲ್ಲದು.

ತುಂಭಾ ಡ್ಯಾಮೇಜ್ ಆದ ಟ್ಯೂಬ್ಸ್ ಇದ್ದರೆ ಮಾತ್ರ ಟೆಸ್ಟ್ ಟ್ಯೂಬ್ ಬೇಬಿ ( ivf ) ಸಲಹೆಯನ್ನು ಕೊಡುತ್ತಾರೆ.
ಮಾಡುವ ವಿಧಾನ:
ಕ್ಯಾನುಲೇಶನ್ ಪ್ರಕ್ರಿಯೆಯನ್ನು ಅನಸ್ಥೇಶಿಯದ ಮೂಲಕ ನೆರವೇರಿಸಲಾಗುತ್ತದೆ. ಲ್ಯಾಪ್ರೋಸ್ಕೋಪ್ ಮೂಲಕ ಗರ್ಭಕೋಶ, ಅಂಡಕೋಶ ಹಾಗೂ ಗರ್ಭನಾಳಗಳ ಸ್ಥಿತಿಗತಿ ಬಗ್ಗೆ ಅರಿತುಕೊಳ್ಳಲಾಗುತ್ತದೆ. ಗರ್ಭನಾಳಗಳು ಎಲ್ಲಿಯಾದರೂ ಅಂಟಿಕೊಂಡಿದ್ದರೆ ಅವನ್ನು ಆಗಲೇ ಬಿಡಿಸುವ ಪ್ರಕ್ರಿಯೆ ನೆರವೇರಿಸಲಾಗುತ್ತದೆ . ಗರ್ಭಕೋಶದ ಗೋಡೆಯ ಆಕಾರ ಹೇಗಿದೆ, ಅದು ಎಷ್ಟು ದಪ್ಪಗಿದೆ ಎನ್ನುವುದನ್ನು ಅರಿತುಕೊಳ್ಳಲಾಗುತ್ತದೆ. ಎಂಡೊಮೆಟ್ರಿಯೋಸಿಸ್’ನಲ್ಲಿ ಅಂಟಿಕೊಂಡಿರುವುದು ಕಂಡುಬಂದರೆ ಅದನ್ನು ನಿವಾರಿಸಲಾಗುತ್ತದೆ. ಬಳಿಕ ಒಂದು ಬಗೆಯ ದ್ರಾವಣವನ್ನು ಗರ್ಭನಾಳಗಳಲ್ಲಿ ಹರಿಸಿ ಅದರ ಸ್ಥಿತಿಗತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ.

ಪ್ರಾಕ್ಸಿಮಲ್ ಟ್ಯೂಬ್ ಬ್ಲಾಕ್ ಆಗಿರುವುದು ಖಚಿತವಾದರೆ ’ಕ್ಯಾನುಲೇಶನ್ ಪ್ರಕ್ರಿಯೆ’ ಆರಂಭಿಸಲಾಗುತ್ತದೆ. ಕೊಳವೆ ಆಕಾರದ ಎರಡು ಥರ್ಮೋ ಗೈಡ್ ತಂತಿಗಳನ್ನು ಗರ್ಭನಾಳಗಳಲ್ಲಿ ತೂರಿಸಿ ಅಲ್ಲಿರುವ ಅಡೆತಡೆಯನ್ನು ಸಂಪೂರ್ಣವಾಗಿ ನಿವಾರಿಸಲಾಗುತ್ತದೆ. ಆ ಬಳಿಕ ಮತ್ತೊಂದು ಬಾರಿ ದ್ರಾವಣ ಹರಿಸಿ ಗರ್ಭನಾಳಗಳ ಸ್ಥಿತಿ ಪರಿಶೀಲಿಸಲಾಗುತ್ತದೆ. ಗರ್ಭನಾಳಗಳಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಖಾತ್ರಿಯಾದರೆ ಗರ್ಭಧಾರಣೆಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ಮನವರಿಕೆಯಾಗುತ್ತದೆ.

:ಡಾ.ಬಿ.ರಮೇಶ್
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‌ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು. 9663311128

 

Leave a Comment