ಹಿರೇಸಾವಳಗಿ ರಥೋತ್ಸವ 18 ರಂದು

 

ಕಲಬುರಗಿ ಏ 15:ತಾಲೂಕಿನ ಹಿರೇಸಾವಳಗಿಯಲ್ಲಿ ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವದ ಪ್ರಯುಕ್ತ ಏಪ್ರಿಲ್ 18 ರಂದು ರಾತ್ರಿ 8 ಗಂಟೆಗೆ ರಥೋತ್ಸವ ನಡೆಯಲಿದೆ. ಈ ಬಾರಿ ದವನದ ಹುಣ್ಣಿಮೆಯು ಏ.18 ರಂದು ರಾತ್ರಿ 7.24 ಗಂಟೆಗೆ ಪ್ರವೇಶಿಸುತ್ತಿರುವದರಿಂದ 18 ರಂದು ರಥೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಗುರುನಾಥ ಮಹಾಸ್ವಾಮಿಗಳು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.17 ರವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕಲ್ಯಾಣಕಟ್ಟೆ ದರ್ಶನ ಕಾರ್ಯಕ್ರಮವಿದೆ. 16 ರಂದು ಸಂಜೆ 5 ಗಂಟೆಗೆ ಶಿವಗಣಾರಾಧನೆ ಮತ್ತು ವಸ್ತ್ರದಾನ. 17 ರಂದು ನಸುಕಿನ 4 ಗಂಟೆಗೆ ಉಚ್ಚಾಯಿ ಉತ್ಸವ.19 ರಂದು ನಸುಕಿನ 4 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮವಿದೆ. 20 ರಂದು ಬೆಳಿಗ್ಗೆ 11 ಗಂಟೆಗೆ ಬಿದಾಯಿ ಕಾರ್ಯಕ್ರಮ ನಂತರ ಕಲಾವಿದರು  ಭಜನೆ ಗಾಯನ ಗೀಗೀಪದಗಳ  ಪ್ರಸ್ತುತ ಪಡಿಸುವರು.ಕಲಬುರಗಿ ಸೂಪರ್ ಮಾರುಕಟ್ಟೆ ಬಸ್‍ನಿಲ್ದಾಣದಿಂದ  ಹಿರೇಸಾವಳಗಿಗೆ ವಿಶೇಷ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ರಮೇಶ ಕನಗೊಂಡ,ಅನೀಲ ದುಧನಿ ಉಪಸ್ಥಿತರಿದ್ದರು…

Leave a Comment