ಹಿರಿಯ ರಂಗಕರ್ಮಿ ಡಿಕೆ ಚೌಟ ನಿಧನಕ್ಕೆ ಪುನರೂರು ಸಂತಾಪ

 

ಮಂಗಳೂರು, ಜೂ.೨೦- ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ರಂಗಭೂಮಿ, ಚಿತ್ರಕಲೆ ಈ ಮುಂತಾದ ಕ್ಷೇತ್ರಗಳ ಧೀಮಂತರಾಗಿ ಉತ್ತಮ ರಂಗ ಸಂಘಟಕರಾಗಿ ನಮ್ಮ ನಾಡಿಗೆ ವಿಶಿಷ್ಟ ಸೇವೆ ಸಲ್ಲಿಸಿದ್ದ ಡಿ.ಕೆ. ಚೌಟ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚೌಟ ಅವರದ್ದು ಬಹುಮುಖ ವ್ಯಕ್ತಿತ್ವವಾಗಿತ್ತು. ಕನ್ನಡ ಮತ್ತು ತುಳು ಭಾಷೆಗಳ ಎಲ್ಲ ಸೃಜನಶೀಲ ಕ್ಷೇತ್ರಗಳಲ್ಲಿಯೂ ಚೌಟ ಅವರ ಕೊಡುಗೆಗಳು ಮಾದರಿಯಾಗಿವೆ. ಪ್ರತಿಷ್ಠಿತ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚೌಟ ಅವರು ಕಲಾವಿದರ ಅಭ್ಯುದಯಕ್ಕೆ ಕೈಗೊಂಡ ಯೋಜನೆಗಳು-ಯೋಚನೆಗಳು ನಿಜಕ್ಕೂ ಅನನ್ಯವಾಗಿವೆ. ಇವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪುನರೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment