ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತ ವಿಧಿವಶ

ಕೋಲ್ಕತಾ, ಜು ೧೭- ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತಾ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ ೭೮ ವರ್ಷ ವಯಸ್ಸಾಗಿತ್ತು.

ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ಬಿದ್ದ ಸ್ವರೂಪ್ ದತ್ತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಾರಿ ಬಿದ್ದ ಕಾರಣ ಅವರಿಗೆ ಮೆದುಳು ಪಾರ್ಶ್ವವಾಯುವಾಗಿದ್ದು ಅವರ ಸ್ಥಿತಿ ಗಂಭೀರವಾಗಿತ್ತು. ಅಲ್ಲದೇ ಅವರು ದೀರ್ಘಾವಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಾಳಿ ಸಿನಿಮಾ ನಟ ಸ್ವರೂಪ ದತ್ತಾ ೧೯೪೧ ರ ಜೂನ್ ೨೨ ರಂದು ಜನಿಸಿದ್ದರು. ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ತಪನ್ ಸಿನ್ಹಾ ಅವರ ಅಪಂಜನ್ ಚಿತ್ರ ದತ್ತಾ ಅವರಿಗೆ ಪ್ರಮುಖ ತಿರುವು ಕೊಟ್ಟಿತ್ತು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು ಪಿತಾ ಪುತ್ರ, ಸಾಗಿನಾ ಮಹತೋ, ಉಪಹಾರ್ ಮೊದಲಾದ ಚಿತ್ರಗಳಲ್ಲಿ ಅವರು ಮನೋಜ್ಞ ಅಭಿನಯ ನೀಡಿದ್ದಾರೆ.

Leave a Comment