ಹಿರಿಯ ನಾಗರಿಕರಿಗೆ ವಿಮಾನ ದರ ರಿಯಾಯಿತಿ 60ಕ್ಕೆ ವಯೋಮಿತಿ ಇಳಿಕೆ

ಮುಂಬೈ, ಏ. ೨೧- ಹೊಸದಾಗಿ ಸೇರ್ಪ‌ಯಾಗುತ್ತಿರುವ ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ. ಏರ್ ಇಂಡಿಯಾ ವಿಮಾನ ಟಿಕೆಟ್ ದರದಲ್ಲಿ ಶೇ. 50ರ ರಿಯಾಯಿತಿ ನೀಡುವ ವಯೋಮಾನವನ್ನು 63 ರಿಂದ 60ಕ್ಕೆ ಇಳಿಸಲಾಗಿದೆ.

ಈ ವಯೋಮಾನದ ಇಳಿಕೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಎಲ್ಲಾ ದೇಶೀಯ ವಲಯದ ಪ್ರಯಾಣಕ್ಕೆ ಅನ್ವಯಿಸುತ್ತದೆ. ಈಗಾಗಲೇ ಬೇಸಿಗೆ ಒತ್ತಡ ಪ್ರಾರಂಭವಾಗಿರುವಂತೆಯೇ ಈ ಹೊಸ ರಿಯಾಯಿತಿ ಆರಂಭ ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲಿದೆ.

63 ವರ್ಷದ ಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ 60 ವರ್ಷಕ್ಕೆ ಇಳಿಸಲಾಗಿದೆಯೆಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಹೊಸ ಪರಿಷ್ಕೃತ ನಿಯಮದಂತೆ ಭಾರತೀಯ ಪ್ರಜೆಯಾದ ಕಾಯಂ ಇಲ್ಲಿನ ನಿವಾಸಿಯಾದ 60 ವರ್ಷ ತುಂಬಿದವರಿಗೆ ಎಕಾನಮಿ ದರ್ಜೆಯಲ್ಲಿ ಮೂಲ ದರದ ಮೇಲೆ ಶೇ. 50ರ ರಿಯಾಯಿತಿ ನೀಡಲಾಗುವುದು ಎಂದು ಅದು ಹೇಳಿದೆ.

ಇದಕ್ಕಾಗಿ ಜನ್ಮ ದಿನಾಂಕ, ಭಾವಚಿತ್ರವಿರುವ ಗುರುತಿನ ಚೀಟಿ, ಅಂದರೆ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ, ವಾಹನ ಚಾಲನಾ ಪರವಾನಗಿ ಪತ್ರ, ಪಾಸ್‌ಪೋರ್ಟ್ ಅಥವಾ ಏರ್ ಇಂಡಿಯಾ ನೀಡಿದ ಸೀನಿಯರ್ ಸಿಟಿಜನ್ ಕಾರ್ಡನ್ನು ಈ ಸೌಲಭ್ಯ ಪಡೆಯಲು ತೋರಿಸಬೇಕಾಗುತ್ತದೆ.

Leave a Comment