ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

ಬೆಂಗಳೂರು, ಫೆ 18- ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆಯಿಂದ ಕಿಶೋರಿ ಬಲ್ಲಾಳ್ ಅವರು ವಿಧಿವಶರಾಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಕಿಶೋರಿ ಬಲ್ಲಾಳ್ ಅವರು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿನವರು. ಬಲ್ಲಾಳ್ ಅವರು ಹಲವು ದಶಕಗಳ ಹಿಂದೆ ‘ಇವಳೆಂತ ಹೆಂಡತಿ’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಸುಮಾರು ೭೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಶಾರುಖ್ ಖಾನ್ ಜತೆ ಹಿಂದಿ ಚಿತ್ರ ವೊಂದರಲ್ಲಿ ಕಿಶೋರಿ ಬಲ್ಲಾಳ್ ನಟಿಸಿದ್ದರು. ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳ್ ಅವರನ್ನು ಕಿಶೋರಿ ವಿವಾಹವಾಗಿದ್ದರು.

ಕಿಶೋರಿ ಬಲ್ಲಾಳ್ ಅವರು ಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 1960ರಲ್ಲಿ ಇವಳೆಂಥಾ ಹೆಂಡತಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು.
ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ನನ್ನುಸಿರೇ, ಕಹಿ, ಶಿವಗಾಮಿ, ಅಕ್ಕತಂಗಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕೇವಲ‌ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದ ಅವರು 2004ರಲ್ಲಿ ತೆರೆಕಂಡ ಬಾಲಿವುಡಗ ನ ‘ಸ್ವದೇಶ್’ ಚಿತ್ರದಲ್ಲಿಯೂ ಶಾರೂಖ್ ತಾಯಿಯಾಗಿ ನಟಿಸಿದ್ದರು.
ಅನೇಕ ಚಿತ್ರಗಳಲ್ಲಿ ಅಜ್ಜಿ, ತಾಯಿ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಅವರ ಪತಿ ಶ್ರೀಪತಿ ಬಲ್ಲಾಳ್ ನಿಧನ ಹೊಂದಿದ್ದರು.

Leave a Comment