ಹಿರಿಯೂರು : ಬಕ್ರೀದ್ ಪೂರ್ವಭಾವಿ ಸಭೆ

ಹಿರಿಯೂರು.ಆ.18: ತ್ಯಾಗ ಬಲಿದಾನದ ಸಂಕೇತವಾದ ಬಕ್ರಿದ್‍ಹಬ್ಬವನ್ನು ಮುಸ್ಲಿಂ ಭಾಂಧವರು ಸಡಗರ ಸಂಬ್ರದಿಂದ ಅಚರಿಸಿ, ಈ ಕಾರ್ಯಕ್ಕೆ ಇಲಾಖೆವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪೊಲೀಸ್ ವೃತ್ತನಿರೀಕ್ಷಕರಾದ ಕೆ.ಟಿ.ಗುರುರಾಜ್ ಹೇಳಿದರು. ನಗರ ಪೊಲೀಸ್‍ಠಾಣೆ ಆವರಣದಲ್ಲಿ ನಡೆದ ಬಕ್ರೀದ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಲ್ಲದೆ ಮೆರವಣ ಗೆ ಸಂದರ್ಭದಲ್ಲಿ ಕಾನೂನಿಗೆ ಭಂಗವಾಗದಂತೆ ಸಹಕರಿಸಿ, ಕಿಡಿಗೇಡಿಗಳ ವಿರುದ್ಧ ಇಲಾಖೆ ಸದಾ ನಿಗಾವಹಿಸುವುದು, ಹಬ್ಬದಲ್ಲಿ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಇಲಾಖೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು, ಧಾರ್ಮಿಕವಾಗಿ ಹಬ್ಬ ಅಚರಿಸಿ ಹೊರಸಂಚಾರ ಹಾಗೂ ಮೋಜಿನ ನೆಪದಲ್ಲಿ ಯಾವುದೇ ಅವಗಢÀಗಳಿಗೆ ಆಸ್ಪದ ಕೊಡುವುದು ಬೇಡ ಎಂದರು. ನಗರಠಾಣೆ ಪಿಎಸ್‍ಐ ಮಂಜುನಾಥ್, ಅಬ್ಬಿನಹೊಳೆ ಪಿಎಸ್‍ಐ ಗುಡ್ಡಪ್ಪ, ಬಿ.ಎಸ್.ನವಾಬ್‍ಸಾಬ್, ಎಸ್‍ಪಿಟಿ ದಾದಾಪೀರ್, ಇಸ್ಲಾಯಿಲ್‍ಜಬೀವುಲ್ಲಾ, ನೂರುಲ್ಲಾ, ರಫಿ, ಮಹಮ್ಮದ್‍ಸೈಪುಲ್ಲಾ, ಭಾಷಸಾಬ್, ರಫೀಕ್‍ಅಹಮದ್, ಮುಬಾರಕ್, ಖಲೀಂ, ನೂರ್‍ಅಹಮದ್ ಮತ್ತಿತರರು ಭಾಗವಹಿಸಿದ್ದರು.

Leave a Comment