ಹಿರಿಯೂರು : ಪ್ರೆಸಿಡೆನ್ಸಿ ಉತ್ಸವ

ಹಿರಿಯೂರು.ಫೆ.12: ಇಲ್ಲಿನ ಪ್ರೆಸಿಡೆನ್ಸಿ ಶಾಲೆಯ ವತಿಯಿಂದ ಶಾಲೆಯ ಆವರಣದಲ್ಲಿ ಪ್ರೆಸಿಡೆನ್ಸಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷರಾದ ಎಂ.ಎನ್.ಸೌಭಾಗ್ಯವತಿ ದೇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರೆಸಿಡೆನ್ಸಿ ಶಾಲೆಯಲ್ಲಿ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದಾರೆ ಎಂದರು ಹಾಗೂ ಪರೀಕ್ಷೆಗಳು ಹತ್ತಿರ ಬರುತ್ತಿದ್ದು ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಓದುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಬೇಕು ತಂದೆ ತಾಯಿ ಗುರುಹಿರಿಯರಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಸ್ವಾಮಿ ಹೋಟೆಲ್ ನ ಮಾಲೀಕರಾದ ಸುಂದರಮುರ್ತಿ, ಶಾಲೆಯ ಅಧ್ಯಕ್ಷರಾದ ಎಂ.ವಿ.ವಿಶ್ವನಾಥ್, ಕಾರ್ಯದರ್ಶಿ ತಿಮ್ಮಾರೆಡ್ಡಿ, ಮುಖ್ಯ ಶಿಕ್ಷಕರಾದ ಖಲಂದರ್ ಬಾಷ, ಲಿಂಗರಾಜು, ಗೀತಾ, ಸುನೀತ ರೇಖಾ ಹೀನಾ ಇಸಿಓ. ಶಶಿಧರ್. ಸಿ.ಆರ್.ಪಿ ಬಲರಾಮ್ ಮತ್ತು ಶಿಕ್ಷಕರ ವೃಂದದವರು ಪಾಲ್ಗೊಂಡಿದ್ದರು. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಇದೇ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Leave a Comment