ಹಿರಿಯೂರು ಕ್ರೀಡಾ ದಿನಾಚರಣೆ

ಹಿರಿಯೂರು.ಆ.30:ಹಿರಿಯೂರಿನ ಸಮನ್ವಯ ಸ್ಫೊಟ್ರ್ಸ್ ಕ್ಲಬ್ ವತಿಯಿಂದ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಘದ ಗೌರವ ಅಧ್ಯಕ್ಷರಾದ ಮಹಮ್ಮದ್ ಫಕೃದ್ದೀನ್‍ರವರು ಕಾರ್ಯಕ್ರಮದ ಉದ್ಘಾಟನೆ ನೆರವೀರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಕ್ರೀಡಾ ದಿನಾಚರಣೆಯನ್ನು ಅಚರಿಸುತ್ತಿದ್ದು ತುಂಬಾ ಮಹತ್ವದ ದಿನವಾಗಿದೆ ಎಂದರು, ನಮ್ಮ ದೇಶದಲ್ಲಿ ಅನೇಕ ಕ್ರೀಡೆಗಳಿದ್ದು ಇಂದಿನ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ ಎಂದರು ಧ್ಯಾನ್ ಚಂದ್ ರವರ ಜನ್ಮ ದಿನಾಚರಣೆ ಅಂಗವಾಗಿ ಕ್ರೀಡಾ ದಿನಾಚರಣೆ ಆಚರಿಸುತ್ತಿರುವ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಬ್ಬಡಿ ಶ್ರೀನಿವಾಸ್, ಡಿ. ತಿಪ್ಪೇಸ್ವಾಮಿ ಡಿ ಗಂಗಾಧರ್, ಅಶೋಕ್ ಕುಮಾರ್, ಮಹಾಲಿಂಗಪ್ಪ, ಕಬಡಿ ಮಂಜಣ್ಣ, ಪರಮೇಶ್, ತಮೀಜ್, ಮುನೇಶ್, ಪ್ರಕಾಶ್, ಇದ್ದರು.

Leave a Comment