ಹಿರಿಯೂರು : ಕನ್ನಡ ರಾಜ್ಯೋತ್ಸವ

ಹಿರಿಯೂರು.ನ.1- ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯನವರು ಧ್ವಜಾರೋಹಣ ನಡೆಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ನಾಡು ನುಡಿ ನೆಲ ಜಲ ಪುರಾತನವಾದ ಭವ್ಯ ಇತಿಹಾಸ ಪರಂಪರೆ ಇದೆ, ದಾಸರು ಸಂತರು ಕೀರ್ತನಾಕಾರರು ಕವಿಗಳು ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ.ಪೂಣ ್ಮಾ ಶ್ರೀನಿವಾಸ್ ರವರು ಮಾತನಾಡಿ ಭವ್ಯ ಪರಂಪರೆ ಇತಿಹಾಸ ವಿರುವ ನಮ್ಮ ಕನ್ನಡ ಬಾಷೆಗೆ ಪ್ರತಿಯೊಬ್ಬರೂ ಪ್ರಥಮ ಆದ್ಯತೆ ನೀಡಬೇಕು ಎಂದರು ಎಲ್ಲರೂ ಕನ್ನಡ ನಾಡು ನುಡಿ ನೆಲ ಜಲ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ತಾಲ್ಲೂಕು ಪಂಚಾಯ್ತಿ ಆದ್ಯಕ್ಷರಾದ ಎಸ್.ಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಗರಸಭೆ ಅಧ್ಯಕ್ಷರಾದ ಟಿ.ಮಂಜುಳಾ ರವರು ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಶಿಕಲಾಸುರೇಶ್ ಬಾಬು, ಗೀತಾ ನಾಗಕುಮಾರ್, ರಾಜೇಶ್ವರಿ ನಗರಸಭೆ ಉಪಾಧ್ಯಕ್ಷರಾದ ಇಮ್ರಾನಾಬಾನು ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಪಿ.ಟಿ.ದಾದಾಪೀರ್ ಹಾಗೂ ಸದಸ್ಯರು ಮುಖಂಡರಾದ ಡಿ.ಟಿ.ಶ್ರೀನಿವಾಸ್ ಹಾಗೂ ಜನಪ್ರತಿನಿಧಿಗಳು ಅಧಿಕಾರಿವರ್ಗದವರು ಪಾಲ್ಗೊಂಡಿದ್ದರು. ಪಥಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

Leave a Comment