ಹಿರಿಯೂರಿನಲ್ಲಿ ಜಿಲ್ಲಾಮಟ್ಟದ ಸಂಗೀತೋತ್ಸವ

ಹಿರಿಯೂರು.ಫೆ.12: ನಗರದ ರೋಟರಿ ಸಭಾಭವನದಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ವತಿಯಿಂದ ಶ್ರೀ ಪುರಂದರ ದಾಸರು ಶ್ರೀಕನಕದಾಸರು ಹಾಗೂ ಶ್ರೀ ತ್ಯಾಗರಾಜ ಮಹಾಸ್ವಾಮಿಯವರ ಪುಣ್ಯ ಸ್ಮರಣೆ ಹಾಗೂ ಜಿಲ್ಲಾಮಟ್ಟದ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಡಾ.ಜಿ.ಕರಿಯಪ್ಪಮಾಳಿಗೆಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪುರಂದರ ದಾಸರು ಕನಕದಾಸರು ಹಾಗೂ ತ್ಯಾಗರಾಜ ಮಹಾಸ್ವಾಮಿಯವರ ಬಗ್ಗೆ ತಿಳಿಸಿದರು ಅಲ್ಲದೇ ಸಂಗೀತ ಹಾಡುವುದರಿಂದ ಮತ್ತು ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು. ನಗರಸಭೆ ಸದಸ್ಯರಾದ ಜಿ.ಪ್ರೇಮ್ ಕುಮಾರ್ ರವರು ಮಾತನಾಡಿ ಹಿರಿಯೂರಿನಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಆರ್. ತಿಪ್ಪೇಸ್ವಾಮಿಯವರ ಸಾರಥ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಗೀತ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಸಂಸ್ಥಾಪಕರು ಪ್ರಾಂಶುಪಾಲರಾದ ಆರ್.ತಿಪ್ಪೇಸ್ವಾಮಿ ನಗರಸಭೆ ಸದಸ್ಯರಾದ ಹೆಚ್.ನಟರಾಜ್, ತಾಲ್ಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷರಾದ ಜೆ.ಬಿ.ರಾಜ್, ಜೆ.ಡಿ.ತಿಮ್ಮಯ್ಯ ಮಂಜುನಾಥ್ ಮಾಳಿಗೆ, ಸುದರ್ಶನ್, ದೇವರಾಜ್, ಎಂ.ರವೀಂದ್ರನಾಥ್, ಎಂ.ಬಿ.ಲಿಂಗಪ್ಪ, ನಿಜಲಿಂಗಪ್ಪ, ಹರ್ತಿಕೋಟೆ ಮಹಾಸ್ವಾಮಿ, ಜಗದಂಬ,ಲಕ್ಷ್ಮೀದೇವಮ್ಮ, ಬಸವರಾಜ್, ಸಿದ್ದಗಂಗಮ್ಮ, ವೇದಪುಷ್ಪ, ಮತ್ತಿತರರು ಪಾಲ್ಗೊಂಡಿದ್ದರು. ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲಾಯಿತು ಹಾಗೂ ಸಂಜೆಯವರೆಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Leave a Comment