ಹಿಮಲಿಂಗ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಜಮ್ಮು – ಕಾಶ್ಮೀರದ ಪರ್ವತ ಶ್ರೇಣಿಯ ತಪ್ಪಲಲ್ಲಿರುವ ಹಿಮಲಿಂಗದ ದರ್ಶನ ಪಡೆಯಲು ಲಕ್ಷಾಂತರ ಮಂದಿ ಪ್ರವಾಹದ ರೀತಿ ಹರಿದುಬಂದಿದ್ದಾರೆ. ಎರಡು ತಿಂಗಳ ಪವಿತ್ರ ಅಮರನಾಥ ಯಾತ್ರೆ ಮೊನ್ನೆಯಷ್ಟೇ ಮುಕ್ತಾಯಗೊಂಡಿದೆ. ಅನಂತ್ ನಾಗ್ ಜಿಲ್ಲೆಯ ಪಲ್ಗಾಮ್‌ನ ಅಮರನಾಥ ಗುಹೆಯಲ್ಲಿರುವ ದೇವಸ್ಥಾನದಲ್ಲಿರುವ ಹಿಮ ಲಿಂಗದ ದರ್ಶನಕ್ಕಾಗಿ ಜನರು ಹವಾಮಾನದ ವೈಪರೀತ್ಯವನ್ನೂ ಲೆಕ್ಕಿಸದೆ, ಸಾಗರೋಪಾದಿಯಲ್ಲಿ ಹರಿದುಬಂದಿದ್ದಾರೆ.

 • ದಾಖಲೆಯ ಯಾತ್ರಾರ್ಥಿಗಳು
  2011 ರಲ್ಲಿ 6.35 ಲಕ್ಷ ಮಂದಿ
  2012 ರಲ್ಲಿ 6.22 ಲಕ್ಷ ಮಂದಿ
  2016 ರಲ್ಲಿ 2,20,000 ಮಂದಿ
  2017 ರಲ್ಲಿ 2,60,000 ಮಂದಿ
  2018 ರಲ್ಲಿ 2,85,000 ಮಂದಿ

amaranatha2
ಅಮರನಾಥಕ್ಕೆ 2 ತಿಂಗಳಲ್ಲಿ ದಾಖಲೆಯ 2.5 ಲಕ್ಷ ಯಾತ್ರಾರ್ಥಿಗಳು

ದಕ್ಷಿಣ ಕಾಶ್ಮೀರದ ೩,೮೮೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ತಪ್ಪಲಿನಲ್ಲಿರುವ ಹಿಮಲಿಂಗದ ದರ್ಶನಕ್ಕಾಗಿ ಯಾತ್ರಾರ್ಥಿಗಳು ಮಳೆ, ಗಾಳಿ, ಚಳಿ ಲೆಕ್ಕಿಸದೆ ದರ್ಶನ ಪಡೆದು ಪುನೀತರಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ೨೦೧೧ ರಲ್ಲಿ  ೬.೩೫ ಲಕ್ಷ ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ಭೇಟಿ ನೀಡಿದ್ದರು.

ಇದುವರೆಗಿನ ಅತ್ಯಧಿಕ ದಾಖಲೆ ಇದಾಗಿದೆ. ೨೦೧೨ ರಲ್ಲಿ ೬.೨೨ ಲಕ್ಷ ಮಂದಿ ಭೇಟಿ ನೀಡಿದ್ದರು. ೨೦೧೬ ರಲ್ಲಿ ೨,೨೦,೪೯೦ ಮಂದಿ, ೨೦೧೭ ರಲ್ಲಿ ೨,೬೦,೦೦೩ ಮಂದಿ ಹಾಗೂ ಈ ವರ್ಷ ೨,೮೫.೦೦೬ ಮಂದಿ ಭೇಟಿ ನೀಡಿದ್ದರು.

amaranatha3

ಪ್ರತಿವರ್ಷ ವಾರ್ಷಿಕವಾಗಿ ನಡೆಯುವ ಅಮರ ನಾಥ ಯಾತ್ರೆಗೆ ದೇಶ – ವಿದೇಶಗಳಿಂದ ಜನರು ಹರಿದುಬರುತ್ತಿದ್ದಾರೆ. ಜಮ್ಮು – ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸವನ್ನೂ ಲೆಕ್ಕಿಸದೆ ಜನರು ಭೇಟಿ ನೀಡುವುದನ್ನು ಗಮನಿಸಿದರೆ, ಜನರಿಗೆ ದೇವರ ಮೇಲಿನ ಭಕ್ತಿ ಎದ್ದುತೋರಿಸುತ್ತಿದೆ.

೨೦೧೬ ರಲ್ಲಿ ಯಾತ್ರಾರ್ಥಿಗಳ ಮೇಲೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಂದಿ ದಾಳಿ ನಡೆಸಿ, ಹಲವು ಯಾತ್ರಾರ್ಥಿಗಳ ಸಾವಿಗೆ ಕಾರಣರಾಗಿದ್ದರು.

ಪ್ರಸ್ತುತ ಜಮ್ಮು – ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದ್ದು, ಯಾತ್ರಾರ್ಥಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಬಿಗಿ ಭದ್ರತೆಯ ನಡುವೆ ಈ ವರ್ಷದ ಅಮರನಾಥ ಯಾತ್ರೆ ಯಶಸ್ವಿಯಾಗಿ  ಮುಕ್ತಾಯಗೊಂಡಿದೆ.

amaranatha1

ಯಾತ್ರಾರ್ಥಿಗಳಿಗೆ ಭದ್ರತೆ ನೀಡುವ ಸಲುವಾಗಿ ಜಮ್ಮು – ಕಾಶ್ಮೀರದ ಪೊಲೀಸರು ಸೇರಿದಂತೆ, ಸಿಆರ್‌ಪಿಎಫ್‌ನ ೨೩೮ ಕಂಪನಿಗಳು ಹಗಲಿರುಳೂ ಭದ್ರತೆಯ ಉಸ್ತುವಾರಿ ವಹಿಸಿದ್ದವು.

ಮೂಲ ಶಿಬಿರದಿಂದ ಅಮರನಾಥ ಗುಹೆಯವರೆಗೂ ಸಿಸಿಟಿವಿಗಳನ್ನು ಅಳವಡಿಸಿ ಹೆಜ್ಜೆಹೆಜ್ಜೆಗೂ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೀಗಾಗಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಿಲ್ಲ.

ಯಾತ್ರೆ ಆರಂಭವಾದ ಮೊದಲ ವಾರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಎರಡು ತಿಂಗಳ ಕಾಲ ಹಂತಹಂತವಾಗಿ ೨,೮೫ ಸಾವಿರ ಮಂದಿ ಯಾತ್ರಿಕರು ಭೇಟಿ ನೀಡಿದ್ದರು.

ಯಾತ್ರಾರ್ಥಿಗಳಿಗೆ ಅಗತ್ಯ ಭದ್ರತೆ ಒದಗಿಸಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದ ಭದ್ರತಾ ಸಿಬ್ಬಂದಿಯನ್ನು ರಾಜ್ಯಪಾಲರು ಅಭಿನಂದಿಸಿದ್ದಾರೆ.

೧೫ನೇ ಶತಮಾನದಿಂದ ಜಮ್ಮು – ಕಾಶ್ಮೀರದ ಪಲ್ಗಾಮ್‌ನಲ್ಲಿರುವ ದೆಹಲಿಯಲ್ಲಿ ಅಮರನಾಥದಲ್ಲಿ ಹಿಮಲಿಂಗದ ದರ್ಶನಕ್ಕೆ ಜನರು ಹರಿದುಬರುತ್ತಿದ್ದಾರೆ.

ಮುಕ್ತಾಯ

ಎರಡು ತಿಂಗಳ ಕಾಲ ನಡೆದ ಅಮರನಾಥ ಯಾತ್ರೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಶಸ್ವಿಯಾಗಿ ಮೊನ್ನೆಯಷ್ಟೇ ಮುಕ್ತಾಯಗೊಂಡಿದೆ. ಈ ಬಾರಿ ೨.೮೫ ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದರು.

Leave a Comment