ಹಿಮಪಾತ ಮೂವರು ಯೋಧರ ಸಾವು

ನವದೆಹಲಿ, ಜ. ೧೪- ಜಮ್ಮು-ಕಾಶ್ಮೀರದ ಕುಪ್ವಾರ, ಬಾರಾಮುಲ್ಲಾ, ಗಂದರ್ಬಾಲ್, ಗುಲ್‌ಮಾರ್ಗ್ ವಲಯದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಗಸ್ತು ತಿರುಗುತ್ತಿದ್ದ ಮೂರು ಮಂದಿ ಸೈನಿಕರು ಹಿಮದಡಿ ಸಿಲುಕಿ ಮೃತಪಟ್ಟಿದ್ದು, ಓರ್ವ ಸೈನಿಕ ಕಾಣೆಯಾಗಿರುವ ಘಟನೆ ನಡೆದಿದೆ. ಮೃತಪಟ್ಟ ಸೈನಿಕರನ್ನು ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆಯ ಬೆಟಾಲಿಯನ್‌ಗೆ ಸೇರಿದವರು ಎಂದು ಸೇನಾ ಮೂಲಗಳು ತಿಳಿಸಿವೆ.

ಕಳೆದ 48 ಗಂಟೆಗಳಲ್ಲಿ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಗಡಿ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸೈನಿಕರು ಹೈರಾಣರಾಗುವಂತೆ ಮಾಡಿದೆ. ಗುಲ್‌ಮಾರ್ಗ್ ಮಾರ್ದದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗರ್ವಾಲ್ ರೈಫಲ್ ರೆಜಿಮೆಂಟ್‌ಗೆ ಸೇರಿದ ಹವಲ್ದಾರ್ ರಾಜೇಂದ್ರಸಿಂಗ್ ನೇಗಿ ಎಂದು ಗುರುತಿಸಲಾಗಿದೆ.

ಜ. 8 ರಂದು ಸಂಜೆ 7.15ರ ಸುಮಾರಿಗೆ ಗುಲ್‌ಮಾರ್ಗ್ ಸೇನಾ ಶಿಬಿರದಿಂದ ಕಾಣೆಯಾಗಿದ್ದರು ಎಂದು ತಿಳಿಸಲಾಗಿದೆ. ಗರ್ಹ್ವಾಲ್ ರೈಫಲ್ಸ್ ರೆಜಿಮೆಂಟ್‌ಗೆ ಸೇರಿಕೊಂಡರು ಎಂದು ಹೇಳಲಾಗಿದೆ. ಅವರು ಉತ್ತರಾಖಂಡದ ಡೆಹ್ರಾಡೂನ್‌ನ ಅಂಬಿವಾಲಾ ಸೈನಿಕ್ ಕಾಲೋನಿಯ ನಿವಾಸಿ ಎಂದು ತಿಳಿದುಬಂದಿದೆ.

ಸೇನಾ ತಂಡಗಳು ಹವಲ್ದಾರ್ ನೇಗಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ, ಈ ಪ್ರದೇಶದಲ್ಲಿ ಭಾರಿ ಹಿಮಪಾತ ಮತ್ತು ತೀವ್ರ ಶೀತ ಪರಿಸ್ಥಿತಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. “ಈ ಘಟನೆ ಸಂಭವಿಸಿರುವ ಪ್ರದೇಶವು ಪೋಸ್ಟ್ ಗುಲ್ಮಾರ್ಗ್ ವಲಯದ ನಿಯಂತ್ರಣ ರೇಖೆಯಿಂದ 200 ಮೀಟರ್ ದೂರದಲ್ಲಿದೆ. ಅವರನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ” ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿಯ ಎತ್ತರದ ಗಡಿಭಾಗದಲ್ಲಿ ಸೈನ್ಯವು ಚಳಿಗಾಲದ ಗುರುತುಗಳನ್ನು ನಿರ್ಮಿಸುತ್ತದೆ, ಏಕೆಂದರೆ ಹಿಮದ ಹಾದಿಯು ಎರಡೂ ಬದಿಗಳನ್ನು ತುಂಬುತ್ತದೆ, ಇದರಿಂದಾಗಿ ನಡೆಯಲು ಅಸಾಧ್ಯವಾಗುತ್ತದೆ. ಗುರುತುಗಳು ಗಸ್ತು ತಂಡಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

ಕಾಣೆಯಾದ ಜವಾನ್ ಪಾಕಿಸ್ತಾನದಲ್ಲಿದ್ದಾರೆ ಎಂಬ ವರದಿಗಳನ್ನು ಸೇನೆ ನಿರಾಕರಿಸಿದೆ. ಭಾರೀ ಹಿಮದಲ್ಲಿ ಬಿದ್ದ ನಂತರ ಹವಿಲ್ದಾರ್ ನೇಗಿ ಪಾಕಿಸ್ತಾನಕ್ಕೆ ಬಂದಿಳಿದಿದ್ದಾರೆ ಎಂದು ಕೆಲವು ವರದಿಗಳು ಹೇಳಿಕೊಂಡ ನಂತರ “ಇದು ಕೇವಲ ಊಹೆಯಾಗಿದೆ” ಎಂದು ಅಧಿಕಾರಿ ಹೇಳಿದರು.

ನೇಗಿ ಅವರ ಪತ್ನಿ ಜನವರಿ 8 ರಂದು 11 ಗರ್ವಾಲ್ ರೈಫಲ್ಸ್‌ನಿಂದ ದೂರವಾಣಿ ಕರೆ ಮಾಡಿ ಪತಿ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದರು. ಆತನನ್ನು ಪತ್ತೆ ಹಚ್ಚುವಂತೆ ನೇಗಿ ಅವರ ಕುಟುಂಬ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ನಡುವೆ ರಾಜಸ್ತಾನದ ಜೈಪುರದಲ್ಲಿ ನಡೆದ ಸಶಸ್ತ್ರ ಪಡೆಗಳ ಹಿರಿಯರ 4ನೇ ದಿನದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಸೇನಾ ಮುಖ್ಯಸ್ಥಕ ಮನೋಜ್ ಮುಕುಂದ್ ನರವಣೆ, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತಿತರರು ಪಾಲ್ಗೊಂಡಿದ್ದಾರೆ.

Leave a Comment