ಹಿಟ್ ಆಂಡ್ ರನ್: ಯುವಕ ದಾರುಣ ಮೃತ್ಯು

 

ಉಡುಪಿ, ಜು.೪- ಕಲ್ಯಾಣಪುರದ ಸೇತುವೆ ಬಳಿ ನಿನ್ನೆ ರಾತ್ರಿ ಹಿಟ್ ಆಂಡ್ ರನ್ ಪ್ರಕರಣ ನಡೆದಿದ್ದು ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣ ಮೃತಪಟ್ಟಿದ್ದಾರೆ. ಬಾಗಲಕೋಟ ಮೂಲದ ನಿವಾಸಿ ಬಸಪ್ಪ ಮೃತ ವ್ಯಕ್ತಿಯಾಗಿದ್ದಾರೆ. ಕಲ್ಯಾಣಪುರದ ಸೇತುವೆ ಬಳಿ ಉಡುಪಿಯಿಂದ ಬ್ರಹ್ಮಾವರ ಕಡೆಗೆ ಪಲ್ಸರ್ ಬೈಕ್‌ನಲ್ಲಿ ಬಸಪ್ಪ ಚಲಿಸುತ್ತಿದ್ದ ಸಂದರ್ಭ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸಪ್ಪ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಹಾಗೂ ಅಪರಿಚಿತ ವಾಹನದಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬಸಪ್ಪ ಅವರ ತಲೆಯ ಮೇಲೆ ವಾಹನ ಚಲಿಸಿ ಅವರ ದೇಹ ಛಿದ್ರಗೊಂಡಿದೆ.

Leave a Comment